ಯುವತಿ ನಾಪತ್ತೆ

ಬೆಳಗಾವಿ, ಸೆ.12 : ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ಗ್ರಾಮದ ನಿವಾಸಿಯಾದ ಪೂಜಾ ಮಹಾಂತೇಶ ಪೊಲಿಸರ್(26) ಇವರು
ಆಗಸ್ಟ್.26 2023 ರಂದು ರಾತ್ರಿ 10 ಗಂಟೆಯಿಂದ ಆ.27 ರ ಬೆಳಿಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಹಿಡಕಲ್ ಗ್ರಾಮದ ತನ್ನ ತವರು ಮನೆಯಿಂದ ಹೋದವಳು ಮನೆಗೆ ಮರಳಿ ಬರದೇ ಕಾಣೆಯಾಗಿದ್ದಾಳೆ ಎಂದು ಇವರ ಪಾಲಕರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆ ಪಟ್ಟಿ:
ಎತ್ತರ 4 ಪೂಟ 5 ಇಂಚ್, ಸಾದಾರಣ ಮೈ ಕಟ್ಟು, ಸಾದಗಪ್ಪು ಮೈ ಬಣ್ಣ, ದುಂಡು ಮುಖ, ಕನ್ನಡ ಭಾಷೆ ಬಲ್ಲವಳಾಗಿದ್ದು, ಹಸಿರು ಬಣ್ಣದ ಸೀರೆ ಧರಿಸಿರುತ್ತಾಳೆ.
ಸದರಿ ಕಾಣೆಯಾದ ಯುತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹರೂಗೇರಿ ಪೊಲೀಸ್ ಠಾಣೆ ಅಥವಾ ಪಾಲಕರ ಮೋ.ನಂ 9901078863 ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.