Belagavi News In Kannada | News Belgaum

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಿಗೆ ಪ್ರವೇಶ

ಬೆಳಗಾವಿ, ಸೆ.012: 2023-24 ನೇ ಸಾಲಿಗೆ ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಿಗೆ ಪ್ರವೇಶಗಳು ಪ್ರಾರಂಭವಾಗಿವೆ.

ಪ್ರತಿ ವಸತಿ ನಿಲಯಕ್ಕೆ 50 ಉದ್ಯೂಗಸ್ಥ ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಆಧ್ಯತೆ ನೀಡಲಾಗುವುದು. ರಾಜಾರಾಮ ನಗರ, ಜಿ.ಐ.ಟಿ ಕಾಲೇಜು ಹತ್ತಿರ ಇರುವ ವಸತಿ ನಿಲಯ ಹಾಗೂ 1ನೇ ಕ್ರಾಸ್, ಅಜಮನಗರದಲ್ಲಿ ಇರುವ ವಸತಿ ಗೃಹಗಳಿಗೆ ಪ್ರವೇಶ ಅರ್ಜಿಗಳನ್ನು ಉದ್ಯೂಗಸ್ಥ ಮಹಿಳೆಯರು ಶಿಶು ಅಭಿವೃದ್ಧಿ ಯೋಜನೆ, ಬೆಳಗಾವಿ (ನಗರ) ಕಛೇರಿ, ಜಿಲ್ಲಾ ಬಾಲ ಭವನ ಹತ್ತಿರ, ಶ್ರೀನಗರ, ಇವರಲ್ಲಿ ಅರ್ಜಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9880040455, 9019733986. ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ನಗರ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.