ಪತಿ ಚಿತ್ರ ರಕ್ತದಿಂದ ಬಿಡಿಸಿದ ನಟಿ

ಬೆಂಗಳೂರು: ಕಿರುತೆರೆ ಜನಪ್ರಿಯ ‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಮನೆ ಮಾತಾದ ನಟಿ ಶಿಲ್ಪಾ ಅಯ್ಯರ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟು 6 ತಿಂಗಳುಗಳಾಗಿದೆ. ಇದೇ ಖುಷಿಯಲ್ಲಿ ಶಿಲ್ಪಾ ಅಯ್ಯರ್ ತನ್ನ ರಕ್ತದಿಂದ ಚಿತ್ರ ಬಿಡಿಸಿ ಪತಿಗೆ ಪ್ರೇಸೆಂಟ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
ನಿರೂಪತಿ ಕಮ್ ನಟಿ ಶಿಲ್ಪಾ ಅವರು ಉದ್ಯಮಿ ಸಚಿನ್ ಎಂಬುವವರನ್ನು ಮೇ 13ರಂದು ಬೆಂಗಳೂರಿನಲ್ಲಿ ಸರಳವಾಗಿ ಮದುವೆಯಾದರು. ಅವರ ದಾಂಪಕ್ಕೆ ಈಗ 6 ತಿಂಗಳು ಪೂರೈಸಿದೆ..
ಸಂಜೀವ್ ಸಂಗಮ್ ಎಂಬ ಆಟೀಸ್ಟ್ ಕೈಯಲ್ಲಿ ತಮ್ಮ ರಕ್ತ ನೀಡಿ, ಪತಿ ಚಿತ್ರವನ್ನು ಚಿತ್ರಿಸಿದ್ದಾರೆ. ಬಳಿಕ ಅದನ್ನ ಚೆಂದವಾಗಿ ಫ್ರೇಮ್ ಹಾಕಿ ಕೊಟ್ಟಿದ್ದಾರೆ. ಕೆಲವರು ನಟಿಯ ನಡೆಗೆ ಮೆಚ್ಚುಗೆ ಸೂಚಿಸಿದ್ರೆ, ಇನ್ನೂ ಕೆಲವರು ಅತೀರೇಕ ಎಂದು ಕಾಮೆಂಟ್ ಮಾಡಿದ್ದಾರೆ..
ಬ್ರಹ್ಮಗಂಟು, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ ಸೀರಿಯಲ್‌ಗಳಲ್ಲಿ ಶಿಲ್ಪಾ ಅಯ್ಯರ್ ನಟಿಸಿದ್ದಾರೆ. ನಟನೆಗೆ ಸ್ಕೋಪ್ ಇರುವ ರೋಲ್‌ನಲ್ಲಿ ಜೀವತುಂಬಿದ್ದಾರೆ. ಆದರೆ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಸೀರಿಯಲ್ ಅಂದರೆ ‘ಜೊತೆ ಜೊತೆಯಲಿ’ ಮಾನ್ಸಿ ಪಾತ್ರವಾಗಿತ್ತು.