ಪಾಲಿಕೆ ಆಯುಕ್ತರಿಂದ ಗಣೇಶ ವಿಸರ್ಜನೆಯ ಸಿದ್ಧತೆಯ ಪರಿಶೀಲನೆ
ಉಳಿದ ಕೆಲಸ ಆದಷ್ಟೂ ಬೇಗ ಮುಗಿಸಿ, ಸುವ್ಯವಸ್ಥಿತ ವಿಸರ್ಜನೆಯ ಸಿದ್ಧತೆಗೆ ಸಲಹೆ

ಪಾಲಿಕೆ ಆಯುಕ್ತರಿಂದ ಗಣೇಶ ವಿಸರ್ಜನೆಯ ಸಿದ್ಧತೆಯ ಪರಿಶೀಲನೆ..
ಉಳಿದ ಕೆಲಸ ಆದಷ್ಟೂ ಬೇಗ ಮುಗಿಸಿ, ಸುವ್ಯವಸ್ಥಿತ ವಿಸರ್ಜನೆಯ ಸಿದ್ಧತೆಗೆ ಸಲಹೆ ಸೂಚನೆ ನೀಡಿದ ಆಯುಕ್ತರು…
ಬೆಳಗಾವಿ : ಬುಧವಾರ ಮಧ್ಯಾಹ್ನ 12-00 ಗಂಟೆಗೆ ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ್ ದುಡಗುಂಟಿ, ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ), ವಿದ್ಯುತ್ ವಿಭಾಗದ ಅಭಿಯಂತವರ್ಗದವರು, ಸಹಾಯಕ ಅಭಿಯಂತರುಗಳು ಹಾಗೂ ಕೆ.ಯು.ಐ.ಡಿ.ಎಫ್.ಸಿ ಅಭಿಯಂತರ ವರ್ಗದವರೊಂದಿಗೆ ಶ್ರೀ ಗಣೇಶ ಉತ್ಸವದ ಅಂಗವಾಗಿ ಕೋಟೆಕೆರೆ ಆವರಣದಲ್ಲಿರುವ ಶ್ರೀ ಗಣೇಶ ಮೂರ್ತಿಗಳ ವಿಸರ್ಜನಾ ಹೊಂಡ ಹಾಗೂ ಕಣಬರ್ಗಿಯಲ್ಲಿರುವ ಹೊಂಡವನ್ನು ಸ್ವಚ್ಛಗೊಳಿಸುವ ಕಾರ್ಯದ ಪರಿಶೀಲನೆ ಮಾಡಿ, ಸದರಿ ಕಾರ್ಯವನ್ನು ಅತೀ ತುರ್ತಾಗಿ ಪೂರ್ಣಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ..

ಕೆ.ಯು.ಐ.ಡಿ.ಎಫ್.ಸಿ ಅಭಿಯಂತವರ್ಗದವರಿಗೆ ಕ್ರೇನ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದ್ದು, ಅಲ್ಲಿಂದ ಖಾಸಭಾಗದಲ್ಲಿಯ/ಅನಗೋಳದ ಲಾಲ ತಾಲವ ಅನಂತರ ಮಜಗಾಂವದಲ್ಲಿಯ ಹೊಂಡವನ್ನು ಪರಿಶೀಲಿಸಿ, ಸಂಬಂಧಿಸಿದವರಿಗೆ ಸಕಲ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಯಿತು ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಯಿತು…

ಕೆ.ಯು.ಐ.ಡಿ.ಎಫ್.ಸಿ ಅಭಿಯಂತವರ್ಗದವರಿಗೆ ಕ್ರೇನ್ ವ್ಯವಸ್ಥೆಯನ್ನು ಮಾಡುವಂತೆ ನಿರ್ದೇಶನ ನೀಡಿದರು, ಬೆಳಗಾವಿ ನಗರದಲ್ಲಿ ಶ್ರೀ ಗಣೇಶ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು, ಕಾರಣ 24/7 ನಿರಂತರ ನೀರು ಸರಬರಾಜು ಇರಬೇಕು, ಸಿವ್ಹಿಲ್ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆದಿದ್ದು, ಅಂತಹ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಕೆ.ಯು.ಐ.ಡಿ.ಎಫ್.ಸಿ ಅಭಿಯಂತರ ವರ್ಗದವರಿಗೆ ಸೂಚಿಸಲಾಗಿದ್ದು, ಅದೇರೀತಿ ರಸ್ತೆಯಲ್ಲಿಯ ತಗ್ಗು-ಗುಂಡಿಗಳನ್ನು ಮುಚ್ಚುವಂತೆ ಪಾಲಿಕೆಯ ಅಭಿಯಂತರ ವರ್ಗದವರಿಗೆ ನಿರ್ದೇಶನ ನೀಡಿದರು..