ಪಾಸಿಂಗ್ ಪೇಚಾಟನಲ್ಲಿ ಸಿಕ್ಕಿ ಬಿಳ್ತಾರಾ? ಆರ್ ಟಿ ಓ ವಿಶಾಲ.

ಚಿಕ್ಕೋಡಿ: ಆರ್ ಟಿ ಓ ಅಧಿಕಾರಿ ನಾಟಕ ರೈತರಿಗೆ ಪ್ರಾಣಸಂಕಟ, ಹೌದು ವಿಕ್ಷಕರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಆರ್ ಟಿ ಓ ವಿಶಾಲ ಜಿ ಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಚಿಕ್ಕೋಡಿ ಇವರು ಒರ್ವ ರೈತನ ಟ್ರ್ಯಾಕ್ಟರ ಡಬ್ಬಿಗಳನ್ನ ಪಾಸಿಂಗ ಮಾಡದೇ ಸತಾಯಿಸುತ್ತಿರುವ ಗಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ ಕಬ್ಬೂರ ಗ್ರಾಮದ ಒರ್ವ ರೈತರು ಕಬ್ಬು ಹೇರುವ ಟ್ರ್ಯಾಕ್ಟರ ಡಬ್ಬಿಗಳನ್ನ ಖರಿದಿಸಿ ಹಲವೂ ದಿನಗಳು ಕಳೆದರು ಡಬ್ಬಿಗಳ ಪಾಸಿಂಗ ಮಾಡದೇ ವರ್ಷಗಳೂ ಕಳೆದಿವೆ ಮದ್ಯವರ್ತಿಯ ಜೊತೆ ಸೇರಿ ಆರ್ ಟಿ ಓ ಅಧಿಕಾರಿ ವಿಶಾಲ ಜಿ ಪಿ ಸಾಹೇಬರು ಸಲೀಸಾಗಿ ಹಣ ಪೀಕುವ ದಂದೆಗೆ ಇಳಿದಿದ್ದಾರೆ,ಎಜೆಂಟರೆ ಅವರ ಪಾಲಿನ ದೇವರುಗಳು ಆದರೆ ಇಲ್ಲಿ ಕೆಲ ದಿನಗಳ ಹಿಂದಷ್ಟೇ ಇಂತಹ ಡಬ್ಬಿಗಳನ್ನ ಪಾಸಿಂಗ ಮಾಡಿ ಕೊಟ್ಟ ದಾಖಲೆಗಳೂ ಕೂಡಾ ಇವೆ ಆದರೆ ಈ ಕಬ್ಬೂರ ಗ್ರಾಮದ ವ್ಯಕ್ತಿಯ ಡಬ್ಬಿಗಳನ್ನ ಮಾತ್ರ ಪಾಸಿಂಗ ಮಾಡಲು ಬರುವದಿಲ್ಲವೆಂದು ರಾಜಾರೋಷವಾಗಿ ಹೇಳಿ ಪೇಚಿಗೆ ಸಿಲುಕಿದ್ದಾರೆ,ಆ ಟ್ರ್ಯಾಕ್ಟರಗಳ ಡಬ್ಬಿಗಳನ್ನ ಹೇಗೆ ಪಾಸಿಂಗ ಮಾಡಿದ್ರೂ ಈ ಡಬ್ಬಿಗಳನ್ನ ಮಾತ್ರ ಯಾಕೇ ಪಾಸಿಂಗ ಮಾಡುತ್ತಿಲ್ಲ ಎಂದು ಕೇಳಿದಾಗ ವಿಶಾಲ ಜಿ ಪಿ ಇವರು ಮಾಡಲ್ಲ ಮಾಡ್ಲಿಕ್ಕೆ ಬರಲ್ಲ ಬೇಕಾದ್ರೆ ಲಿಖಿತವಾಗಿ ಬರೆದು ಕೊಡ್ತಿನಿ ಎಂದು ರೈತರಿಗೆ ಅವಾಜ ಹಾಕಿ ಒಂದು ವರ್ಷದಿಂದ ಹೀಗೆ ಹೇಳಿಕೊಂಡು ಕಾಡಿಸುತ್ತಿದ್ದಾನೆಂದು ರೈತರು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ ಪಿ ಇವರ ಮೇಲೆ ಆರೋಪ ಮಾಡಿದ್ದಾರೆ .
ಈ ಹಿಂದೆ ಡಬ್ಬಿಗಳನ್ನ ಪಾಸಿಂಗ ಮಾಡಿದ್ದಿರಿ ಇವುಗಳನ್ನ ಏಕೆ ಮಾಡುತ್ತಿಲ್ಲವೆಂದು ಸಹಜವಾಗಿಯೇ ತಪ್ಪಿನಲ್ಲಿ ಆರ್ ಟಿ ಒ ಅಧಿಕಾರಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ.ಇದೆ ಟ್ರೈಲಿ ಪಾಸಿಂಗನ್ನ ಅಥಣಿಯಲ್ಲಿ ಮಾಡಿದ ಉದಾಹರಣೆಗಳಿವೆ ಆದರೆ ಈ ಕಬ್ಬೂರ ಗ್ರಾಮದ ರೈತನ ಟ್ರೈಲಿ ಮಾತ್ರ ಪಾಸಿಂಗ ಮಾಡಲು ನಿರಾಕರಿಸಿದ್ದು.ಹಲವೂ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ನೇರವಾಗಿಯೆ ಸಾರ್ವಜನಿಕರ ಮುಂದೆ ನನಗೆ ಈ ಪಾಸಿಂಗ ಮಾಡಲು ಆಗಲ್ಲ ಲಿಖಿತವಾಗಿ ಬರೆದು ಕೊಡ್ತಿನಿ ಎಂದು ಆರ್ಟಿಒ ಮಾದ್ಯಮದ ಮುಂದೆ ಮಾತನಾಡಿದ್ದಾರೆ ಆದರೆ ಅಥಣಿಯಲ್ಲಿ ಮಾತ್ರ ಇದೆ ರೀತಿ ಡಬ್ಬಿಗಳ ಪಾಸಿಂಗ ಮಾಡಿದ ಆರ್ ಸಿ ಬುಕ್ ಆರ್ ಟಿ ಒ ಮುಂದೆ ರೈತರು ತಂದಿಟ್ಟಿದ್ದಾರೆ.
ಈ ಎಲ್ಲಾ ಡಬ್ಬಿಗಳನ್ನ ನಾನೆ ಮಾಡಿದ್ದು ಆದರೆ ಈಗ ಮಾತ್ರ ಆಗಲ್ಲ ಎಂದು ತಪ್ಪಿಗೆ ಸಿಲುಕಿದ್ದಾರೆ ಈ ಎಲ್ಲಾ ಇಲ್ಲಿಗಲ್ ಪಾಸಿಂಗ ಮಾಡಿದ ಆರ್ ಟಿ ಒ ವಿರುದ್ಧ ಕಾನೂನಿನ ಸೂಕ್ತ ಕ್ರಮ ಕೈಗೊಂಡು ಇಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ರೈತ ಸಂಘಟನೆಯ ಅಧ್ಯಕ್ಷರಾದ ಗೋಪಾಲ ಮರಬಸನ್ನವರ ಮಾದ್ಯಮಾದ ಕಿಡಿ ಕಾರಿದ್ದಾರೆ ನಂತರ ಸಾವಳಗಿ ಗ್ರಾಮದ ಮುಖಂಡರಾದ ಶೆಟ್ಯಗೌಡಾ ಪಾಟೀಲ ರಮೇಶ ಪಾಟೀಲ ಹಾಗೂ ಪತ್ರಕರ್ತರು ಆರ್ ಟಿ ಓ ನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ