ಎಲ್ ಆ್ಯಂಡ್ ಟಿ ಕಂಪನಿಗೆ 21 ಕೋಟಿ ದಂಡ ವಿಧಿಸಿದ ಬೆಳಗಾವಿ ಪಾಲಿಕೆ ಆಯುಕ್ತ

ಬೆಳಗಾವಿ: ನಿಗದಿತ ಅವಧಿಯಲ್ಲಿ ಗುರಿಸಾಧನೆ ಮಾಡದೇ ಇರುವುದು ಸೇರಿದಂತೆ ಕಳಪೆ ಮಟ್ಟದ ಕಾಮಗಾರಿ ಮಾಡಿದ ಹಿನ್ನೆಲೆಯಲ್ಲಿ ಎಲ್ ಆ್ಯಂಡ್ ಟಿ ಕಂಪನಿಗೆ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಬರೊಬ್ಬರಿ 21 ಕೋಟಿ 46 ಲಕ್ಷ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ.
ಬೆಳಗಾವಿಗೆ ನಿರಂತರ ಕುಡಿಯುವ ನೀರು ಸೇರಿದಂತೆ ಇತರ ಕಾಮಗಾರಿ ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿ 2021-2025ವರೆಗೆ ಟೆಂಡರ್ ಪಡೆಯಲಾಗಿತ್ತು. ಆದರೆ ಸದ್ಯ 3 ಅವಧಿ ಪೂರ್ಣಗೊಂಡರೂ ಕೇವಲ ಶೇ.60 ರಷ್ಟು ಕಾಮಗಾರಿ ಮಾಡಲಾಗಿದೆ.
ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸದವರಿಗೆ ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸುವ ಕೆಲಸವನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾಡಿದ್ದು, ಬರೊಬ್ಬರಿ ಎಲ್ ಆ್ಯಂಡ್ ಟಿ ಕಂಪನಿಗೆ 21 ಕೋಟಿ 46 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಅಷ್ಟೇ ಅಲ್ಲ ಸಂಬಂಧಿಸಿದ ಕಂಪನಿಗೆ ಕಾರಣ ಸಮೇತ ಉಲ್ಲೇಖಿಸಿ ಪತ್ರವನ್ನು ಕಳೆದ ದಿ 12ರಂದು ರವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಮಾಹಿತಿ ತಿಳಿಸಿದ್ದಾರೆ.