Belagavi News In Kannada | News Belgaum

ಭೋಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸಂಭ್ರಮ ಸಂಪನ್ನ.

ಕೆಂಭಾವಿ: ಪಟ್ಟಣದ ಐತಿಹಾಸಿಕ ಆದ್ಯ ವಚನಕಾರ ಭೋಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಶ್ರಾವಣ ಮಾಸದ ಸಂಭ್ರಮ ಸಂಪನ್ನ ಕಾರ್ಯಕ್ರಮ ಬಹು
ವಿಜೃಂಬಣೆಯಿಂದ ಜರುಗಿತು.
ಗುರುವಾರದಿಂದ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳು ಧಾರ್ಮಿಕ ಕಾರ್ಯಕ್ರಮಗಳು ನಡೆದವು ಶುಕ್ರವಾರ ಬೆಳಗಿನ ಜಾವದ ವರೆಗೆ ಭಜನೆ ಕಾರ್ಯರಮ ಜರುಗಿತು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ 108 ಕುಂಭ ಮತ್ತು ಮಕ್ಕಳ ಕೋಲಾಟದೊಂದಿಗೆ ಪಲ್ಲಕ್ಕಿ ಉತ್ಸವ ನಡೆದು ನಂತರ ಭೋಗೇಶ್ವರನಿಗೆ ರಾಜಶೇಖರಯ್ಯ ಹಿರೇಮಠ ನೇತೃತ್ವದಲ್ಲಿ ಅಭಿಷೇಕ, ಲಕ್ಷ ಬಿಲ್ವಾರ್ಚನೆ, ರುದ್ರ ಪಠಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ, ಸೇವಾ ಕರ್ತರಿಗೆ
ಮತ್ತು ಸ್ವಯಂ ಸೇವಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು. ನಂತರ ಒಂದು ತಿಂಗಳ ಪರ್ಯಂತ ಶ್ವೇತ ವಸ್ತ್ರದಾರಿಗಳು ಭೋಗೇಶ್ವರನ ಸೇವೆಗೈದ ಭಕ್ತರು ತಮ್ಮ ಸೇವೆಯನ್ನು ಸಂಪೂರ್ಣಗೊಳಿಸಿದರು.
ಚನ್ನಯ್ಯ ಚಿಕ್ಕಮಠ, ಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಅಂಗಡಿ, ಗಿರೀಶ ಅಂಗಡಿ, ಮಲ್ಲಿಕಾರ್ಜುನ ಬಿದರಿ, ಸಂಗಣ್ಣ ತುಂಬಗಿ,
ಮಹಾಂತೇಶ, ದೇವು ಹಡಪದ, ಗುರು ಕುಂಬಾರ, ತಿಪ್ಪಣ್ಣ ಕುಂಬಾರ, ಮೋಹನರೆಡ್ಡಿ ಡಿಗ್ಗಾವಿ, ಗುರಪ್ಪ ಬಿದರಿ, ರಮೇಶ ಅಂಗಡಿ ಸೇರಿದಂತೆ ಹಲವರು ಇದ್ದರು.