Belagavi News In Kannada | News Belgaum

ಗೌರಿಗಣೇಶ ಹಬ್ಬದ ಪ್ರಯುಕ್ತ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ

ಬೆಳಗಾವಿ, ಸೆ.15 : ಗೌರಿಗಣೇಶ ಹಬ್ಬದ ಪ್ರಯುಕ್ತ ಬೆಳಗಾವಿ ನಗರದ ವ್ಯಾಪ್ತಿಯಲ್ಲಿ ಪ್ರತಿಷ್ಠಾನಗೊಳ್ಳಲಿರುವ ಸಾರ್ವಜನಿಕ ಗಣಪತಿ ಮೂರ್ತಿಗಳ ವೀಕ್ಷಣೆಗೆ ಬೆಳಗಾವಿ ನಗರ ಹಾಗೂ ಉಪನಗರಗಳಿಂದ ಆಗಮಿಸುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ sಸಪ್ಟೆಂಬರ್ 22, 2023 ರಿಂದ ಸ.28 ರ ವರೆಗೆ ನಗರ ಸಾರಿಗೆಗಳಾದ ಅನಗೋಳ, ವಡಗಾಂವ, ಮಜಗಾಂವ, ವಂಟಮೂರಿ, ಗುರುಪ್ರಸಾದ ಕಾಲನಿ, ಸಹ್ಯಾದ್ರಿನಗರ ಬಡಾವಣೆಯ ಹಾಗೂ ಯಳ್ಳೂರ ಮಾರ್ಗದ ಮಾರ್ಗಸೂಚಿಗಳಿಗೆ ಪ್ರಯಾಣಿಕರ ಜನದಟ್ಟಣೆಗೆ ಅನುಸರಿಸಿ ತಡರಾತ್ರಿವರೆಗೆ ಹೆಚ್ಚುವರಿ ಸುತ್ತುಗಳನ್ನು ಅಳವಡಿಸಿ ವಾಹನ ಕಾರ್ಯಾಚರಣೆಗೊಳಿಸಲಾಗುತ್ತದೆ.
ಬೆಳಗಾವಿ ವಿಭಾಗದ ವ್ಯಾಪ್ತಿಗೆ ಒಳಪಡುವ ಬೈಲಹೊಂಗಲ/ಖಾನಾಪೂರ ಘಟಕಗಳ ವಿವಿಧ ಮಾರ್ಗಗಳಿಂದ ಮತ್ತು ಗೋಕಾಕ, ಕೊಲ್ಲಾಪೂರ, ಚಿಕ್ಕೋಡಿ ಮುಂತಾದ ಮಾರ್ಗಗಳಿಂದ ಬೆಳಗಾವಿ ನಗರಕ್ಕೆ ಸಾರ್ವಜನಿಕ ಗಣಪತಿ ಮೂರ್ತಿಗಳ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಜನದಟ್ಟಣೆಗಣುಗುಣವಾಗಿ ಈ ಅವಧಿಯಲ್ಲಿ ತಡರಾತ್ರಿ ವರೆಗೆ ಪ್ರತಿ ಘಟಕದಿಂದ 2 ರಿಂದ 3 ವಾಹನಗಳನ್ನು ಹೆಚ್ಚುವರಿಯಾಗಿ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ಸದರಿ ವಿಶೇಷ ಸಾರಿಗೆಗಳ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ವಾಕರಸಾಸಂಸೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.