Belagavi News In Kannada | News Belgaum

ವಿಶ್ವಕರ್ಮ ಸಮಾಜ ಶ್ರೀಮಂತವಾಗಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ: ವಿಶ್ವಕರ್ಮ ಸಮಾಜ ಹಿಂದುಳಿದ ಸಮಾಜವಲ್ಲ, ಅತ್ಯಂತ ಮುಂದುವರಿದ ಸಮಾಜ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು..

ಕಾಪು ತಾಲೂಕಿನ ಪಡುಕುತ್ಯಾರುವಿನಲ್ಲಿರುವ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಕ್ಕೆ ಇಂದು ಭೇಟಿ ನೀಡಿ, ಮಾತನಾಡಿದ ಸಚಿವರು, ಇಂದು ಹೊಸ ಹೊಸ ವಿನ್ಯಾಸಗಳು ಮಾರುಕಟ್ಟೆಗೆ ಬಂದಿರಬಹುದು, ವಿಶ್ವಕರ್ಮನ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ..

 

ವಿಶ್ವಕರ್ಮನ ಕಲೆಯನ್ನು ಇಡೀ ವಿಶ್ವವೇ ಮೆಚ್ಷಿದೆ ಎಂದರು. ಹೆಣ್ಣು ಅಂಧವಾಗಿ ಕಾಣಲು ವಿಶ್ವಕರ್ಮ ಕೈಚಳಕವೇ ಕಾರಣ. ಮೂಗುತಿ, ಕೈಬಳೆಯನ್ನು ತಯಾರಿಸುವ ಮೂಲಕ ಹೆಣ್ಣು ಚೆಂದವಾಗಿ ಕಾಣಲು ಪ್ರಥಮ ಪಾತ್ರವಹಿಸಿದ್ದಾನೆ ಎಂದು ಸಚಿವರು ತಿಳಿಸಿದರು.

ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ 2013 ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ವಿಶ್ವಕರ್ಮ ಸಮಾಜಕ್ಕೆ ನಿಗಮ ಮಂಡಳಿಯನ್ನು ಸ್ಥಾಪಿಸಿದ್ದರು. ವಿಶ್ವಕರ್ಮ ಸಮಾಜವನ್ನು ಶೈಕ್ಷಣಿಕವಾಗಿ ಮುಂದೆ ತರಬೇಕಿದೆ, ಉಳಿದಂತೆ ಯಾವ ಕ್ಷೇತ್ರದಲ್ಲೂ ಸಮಾಜ‌ ಹಿಂದೆ ಉಳಿದಿಲ್ಲ ಎಂದರು..

 

ಪಡುಕುತ್ಯಾರುವಿನಲ್ಲಿರುವ ಆನೆಗುಂದಿ ಕ್ಷೇತ್ರವನ್ನು ಪ್ರವಾಸೋದ್ಯಮ ಸ್ಥಳವಾಗಿಸಲು ಶ್ರಮಿಸುವುದಾಗಿ ಸಚಿವರು ಭರವಸೆ ನೀಡಿದರು. ಈ ವೇಳೆ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಚಿವರನ್ನು ಆಶೀರ್ವದಿಸಿದರು. ಈ ವೇಳೆ ಪ್ರತಿಷ್ಠಾನದ‌‌ ಅಧ್ಯಕ್ಷರಾದ ವಡೆರೊಬಳಿ ಶ್ರೀಧರ್ ಆಚಾರ್ಯ, ಹಳೆಯಂಗಡಿ ಸೂರ್ಯಕುಮಾರ್ ಸೇರಿದಂತೆ ಮಠದ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು..