Belagavi News In Kannada | News Belgaum

ಮೂವರು ಮಹಿಳೆಯರ ಮೇಲೆ ಗ್ಯಾಂಗ್‍ರೇಪ

ಪಾಣಿಪತ್‍ನಲ್ಲಿ ಮತ್ತೊಂದು ದುಷ್ಕೃತ್ಯ

ಚಂಡೀಗಢ: ಅಪರಿಚಿತ ವ್ಯಕ್ತಿಗಳು ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ನಡೆದಿರುವುದು ಹರಿಯಾಣ ಪಾಣಿಪತ್‍ನಲ್ಲಿ ಬೆಳಕಿಗೆ ಬಂದಿದೆ..

 

ಈ ಘಟನೆ ಬುಧವಾರ ನಡೆದಿದ್ದು, ಆರೋಪಿಗಳು, ಚಾಕು ಹಾಗೂ ಹರಿತವಾದ ಆಯುಧಗಳನ್ನು ಹಿಡಿದು ಬೆದರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ..

 

ಆರೋಪಿಗಳು ನಾಲ್ವರು ಕುಟುಂಬಗಳು ವಾಸಿಸುತ್ತಿದ್ದ ಮನೆಗೆ ನುಗ್ಗಿದ್ದಾರೆ. ಬಳಿಕ ಮೂವರು ಮಹಿಳಾ ಕಾರ್ಮಿಕರ ಮೇಲೆ ಅತ್ಯಾಚಾರ ಎಸಗುವ ಮುನ್ನ ಅವರ ಕುಟುಂಬದ ಸದಸ್ಯರನ್ನು ಹಗ್ಗಗಳಿಂದ ಕಟ್ಟಿಹಾಕಿದ್ದಾರೆ. ಕೃತದ ಬಳಿಕ ಆರೋಪಿಗಳು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. .