ದುಶ್ಚಟಗಳಿಗೆ ಬಲಿಯಾಗದೆ ವ್ಯಕ್ತಿತ್ವ ರೂಪಿಸಿಕೊಳ್ಳಿ : ಬಸವರಾಜ ಸೊಪ್ಪಿಮಠ
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಮದ್ಯವರ್ಜನ ಶಿಬಿರ ಉದ್ಟಾಟನೆ

ಬೆಳಗಾವಿ: ನಾವು ದುಶ್ಚಟಗಳಿಂದ ದೂರವಾಗಾದ ಮಾತ್ರ ಮನುಷ್ಯನಿಗೆ ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲಿದೆ. ಸಮ-ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮಕ್ಕಳು ನಾವಾಗಬೇಕೇ ಹೊರೆತು, ದುಶ್ಚಟಗಳಿಗೆ ಅಂಟಿಕೊಂಡು ಸಮಾಜಕ್ಕೆ ಮಾರಕವಾಗಬಾರದು” ಎಂದು ಬೆಳಗಾವಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಸವರಾಜ ಸೊಪ್ಪಿಮಠ ಹೇಳಿದರು.
ಇಲ್ಲಿನ ಶ್ರೀ ಪಡಿಬಸವೇಶ್ವರ ದೇವಸ್ಥಾನ ಸಭಾ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಿರೇಬಾಗೇವಾಡಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 1726 ನೇಯ ಮದ್ಯವರ್ಜನ ಶಿಬಿರ ಕಾರ್ಯಕ್ರಮ ಉದ್ಟಾಟಿಸಿ ಅವರು ಮಾತನಾಡಿ,
ದುಶ್ಚಟದಿಂದ ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ವ್ಯಸನಮುಕ್ತ ಜೀವನ ನಡೆಸಿದಾಗ ಮಾತ್ರ ಅರ್ಥಿಕವಾಗಿ ಸುಧಾರಣೆಯಾಗಲು ಒಳ್ಳೆಯ ಅವಕಾಶ ಸಿಗಲಿವೆ ಎಂದು ಕಿವಿ ಮಾತು ಹೇಳಿದರು.
ದರ್ಗಾದ ಪೀಠಾಧಿಪತಿ ಅಶ್ರಪ ಕಾದ್ರಿ ಅಜ್ಜ ಮಾತನಾಡಿ , ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಶಿಬಿರದ ಅಧ್ಯಕ್ಷತೆ ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಪಾಟೀಲ ವಹಿಸಿದ್ದರು. , ಉಪಾಧ್ಯಕ್ಷೆ ಪುಷ್ಪಾವತಿ ನಾಯ್ಕರ, ಜಿಲ್ಲಾ ಯೋಜನಾ ನಿರ್ದೇಶಕ ಸತೀಶ ನಾಯ್ಕ, ಶಿಬಿರದ ಯೋಜನಾಧಿಕಾರಿ ಭಾಸ್ಕರ ಎನ್ ಯೋಜನಾ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ದೇವಸ್ಥಾನ ಕಮೀಟಿಯ ಅಧ್ಯಕ್ಷ ವೈ.ಎಲ್. ಪಾಟೀಲ, ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಪ್ಪ .ಶಿಂತ್ರಿ, ಗೌರವಾಧ್ಯಕ್ಷ ಐ.ಬಿ. ಅರಳೀಕಟ್ಟಿ, ಯೋಜನಾಧಿಕಾರಿ ಯೋಗೀಶ ಕೆ, ಶಿಬಿರದ ವೈದ್ಯಾಧಿಕಾರಿ ಡಾ.ಪಡಿಗೌಡ ಪಾಟೀಲ, ಡಾ.ಚಂದ್ರ ನಾಯ್ಕ, ಮೇಲ್ವಿಚಾರಕಿ ಗಂಗಾ ಪಾಟೀಲ ಇನ್ನಿತರರು ಇದ್ದರು.