ಅಪ್‌ಡೇಟರ್ ಸರ್ವಿಸಸ್ ಲಿಮಿಟೆಡ್ (ಕಂಪನಿ) 2023 ಸೆಪ್ಟೆಂಬರ್ 25ರ ಸೋಮವಾರ ಈಕ್ವಿಟಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ

Hubballi : ಅಪ್‌ಡೇಟರ್ ಸರ್ವಿಸಸ್ ಲಿಮಿಟೆಡ್ (ಕಂಪನಿ) 2023 ಸೆಪ್ಟೆಂಬರ್ 25ರ ಸೋಮವಾರ ಈಕ್ವಿಟಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಆರಂಭಿಕ ಷೇರು ಮಾರಾಟ ಮಾಡಲಿದೆ. 4,000.00 ದಶಲಕ್ಷ ರೂಪಾಯಿ ಮೌಲ್ಯದ ತಾಜಾ ಷೇರುಗಳು ಮತ್ತು ಷೇರುದಾರರಿಗೆ(ಪಾಲುದಾರರಿಗೆ) 8,000,000 ಈಕ್ವಿಟಿ ಷೇರುಗಳನ್ನು ಸಹ ಮಾರಾಟ ಮಾಡಲಿದೆ.
2023 ಸೆಪ್ಟೆಂಬರ್ 25ರ ಸೋಮವಾರ ಷೇರುಗಳ ಮಾರಾಟ ಆರಂಭವಾಗಿ, ಚಂದಾದಾರಿಕೆ 2023 ಸೆಪ್ಟೆಂಬರ್ 27ರ ಬುಧವಾರ ಮುಕ್ತಾಯವಾಗಲಿದೆ. ಪ್ರತಿ ಈಕ್ವಿಟಿ ಷೇರಿಗೆ ದರ ಪಟ್ಟಿಯನ್ನು 280ರಿಂದ 300 ರೂ.ವರೆಗೆ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಕನಿಷ್ಠ 50 ಈಕ್ವಿಟಿ ಷೇರುಗಳ ಹರಾಜು ನಡೆಸಬಹುದು. ತದನಂತರ 50 ಈಕ್ವಿಟಿ ಷೇರುಗಳ ಗುಣಕಗಳೊಂದಿಗೆ ಬಿಡ್ ನಡೆಸಬಹುದು.
ಆರಂಭಿಕ ಷೇರು ಬಿಡುಗಡೆ ಮೂಲಕ ಕ್ರೋಡೀಕರಣವಾಗುವ ನಿವ್ವಳ ನಿಧಿಯನ್ನು ಕಂಪನಿಯು ಈಗಾಗಲೇ ಮಾಡಿರುವ ಸಾಲಗಳ ಮರುಪಾವತಿ ಮತ್ತು ನಿರ್ದಿಷ್ಟ ಪೂರ್ವಪಾವತಿಗಳಿಗಾಗಿ 1,330.00 ದಶಲಕ್ಷ ರೂಪಾಯಿ ಬಳಕೆ ಮಾಡಲಿದೆ. ಹೆಚ್ಚುವರಿಯಾಗಿ, 800.00 ದಶಲಕ್ಷ ರೂಪಾಯಿ ನಿವ್ವಳ ನಿಧಿಯನ್ನು ಇನ್ನೂ ಗುರುತಿಸದ ಸ್ವಾಧೀನ, ವಿಲೀನ, ಹೊಸ ಘಟಕಗಳ ಸ್ಥಾಪನೆ ಇತ್ಯಾದಿ ಉದ್ದೇಶಗಳಿಗೆ (ಇನ್-ಆರ್ಗ್ಯಾನಿಕ್ ಇನಿಶಿಯೇಟಿವ್ಸ್) ಬಳಸಲಿದೆ. ಅಲ್ಲದೆ, 1,150.00 ದಶಲಕ್ಷ ರೂಪಾಯಿ ನಿಧಿಯನ್ನು ದುಡಿಮೆ ಬಂಡವಾಳ ಉದ್ದೇಶಗಳಿಗೆ ಹಾಗೂ ಇನ್ನುಳಿದ ಮೊತ್ತವನ್ನು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗೆ ಬಳಸಲು ಚಿಂತಿಸಿದೆ.
ಕಂಪನಿಯು ಆರಂಭಿಕ ಷೇರು ಬಿಡುಗಡೆ(ಐಪಿಒ) ಮೂಲಕ 4,000,000 ಈಕ್ವಿಟಿ ಷೇರುಗಳನ್ನು ತಂಗಿ ಫೆಸಿಲಿಟಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್(ಪ್ರವರ್ತಕ ಮಾರಾಟ ಷೇರುದಾರರು)ಗೆ, 800,000 ವರೆಗಿನ ಈಕ್ವಿಟಿ ಷೇರುಗಳನ್ನು ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಫಂಡ್-II ಮತ್ತು 3,200,000 ಈಕ್ವಿಟಿ ಷೇರುಗಳನ್ನು ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಫಂಡ್-IIA(ಇತರೆ ಮಾರಾಟ ಷೇರುದಾರರು)ಗೆ ಮಾರಾಟ ಮಾಡಲಿದೆ.
2023 ಸೆಪ್ಟೆಂಬರ್ 18ರಂದು ಸೆಬಿ ನೋಂದಣಿಗಾಗಿ ಸಲ್ಲಿಸಿರುವ ಪ್ರಾಥಮಿಕ ಮಾಹಿತಿಯ ದಾಖಲೆ(ಆರ್ ಎಚ್ ಪಿ) ಮೂಲಕ ಮಾಡುವ ಆರಂಭಿಕ ಷೇರು ಬಿಡುಗಡೆಯನ್ನು ಕಂಪನಿಯು ಮುಂಬಯಿ ಷೇರು ಮಾರುಕಟ್ಟೆ ನಿಯಮಿತ ಮತ್ತು ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲು ಉದ್ದೇಶಿಸಿದೆ. ಐಪಿಒ ಕೊಡುಗೆ ಬಿಡುಗಡೆಗೆ ಬಿಎಸ್ಇ ನಿಯೋಜಿತ ಷೇರು ಮಾರುಕಟ್ಟೆಯಾಗಿದೆ.
ಅರ್ಹ ಸಾಂಸ್ಥಿಕ ಹೂಡಿಕೆದಾರರು ಅಥವಾ ಖರೀದಿದಾರರನ್ನು ಹೊರತುಪಡಿಸಿ, ಇನ್ನುಳಿದ ಎಲ್ಲಾ ಸಾರ್ವಜನಿಕ ಹರಾಜುದಾರರು ಕಡ್ಡಾಯವಾಗಿ ನಿರ್ಬಂಧಿಸಿದ ಮೊತ್ತ ಬೆಂಬಲಿತ ಅರ್ಜಿ(ಎಎಸ್ ಬಿಎ) ಸಲ್ಲಿಕೆ ಪ್ರಕ್ರಿಯೆ ಮೂಲಕ ಹರಾಜಿನಲ್ಲಿ ಭಾಗವಹಿಸಬೇಕು. ಸಂಬಂಧಿತ ASBA ಖಾತೆಯ ವಿವರಗಳನ್ನು ಒದಗಿಸಬೇಕು. ಯುಪಿಐ ಬಿಡ್ ದಾರರು ಯುಪಿಐ ಗುರುತಿನ ದಾಖಲೆ ಒದಗಿಸಬೇಕು. ಅವರ ಬಿಡ್ ಮೊತ್ತವನ್ನು ಸ್ವಯಂ ಪ್ರಮಾಣೀಕೃತ ಸಿಂಡಿಕೇಟ್ ಬ್ಯಾಂಕ್‌ಗಳು (ಎಸ್ ಸಿ ಎಸ್ ಬಿ ಗಳು) ಅಥವಾ ಯುಪಿಐ ವ್ಯವಸ್ಥೆಯ ಅಡಿ, ಪ್ರಾಯೋಜಕ ಬ್ಯಾಂಕ್ ಗಳು ಸಂದರ್ಭಾನುಸಾರ, ಆಯಾ ಬಿಡ್ ಮೊತ್ತದ ಮಟ್ಟಿಗೆ ನಿರ್ಬಂಧಿಸುತ್ತವೆ. ಎಎಸ್ ಬಿಎ ಪ್ರಕ್ರಿಯೆಯ ಮೂಲಕ ಆಫರ್‌ನಲ್ಲಿ ಭಾಗವಹಿಸಲು ಸಾಂಸ್ಥಿಕ ಹೂಡಿಕೆದಾರರಿಗೆ ಅನುಮತಿ ಇಲ್ಲ.
ಕಂಪನಿಯ ಆರಂಭಿಕ ಷೇರು ಬಿಡುಗಡೆಗೆ ಐಐಎಫ್ಎಲ್ ಸೆಕ್ಯೂರಿಟೀಸ್ ಲಿಮಿಟೆಡ್, ಮೋತಿಲಾಲ್ ಓಸ್ವಾಲ್ ಇನ್ವೆಸ್ಟ್ ಮೆಂಟ್ ಅಡ್ವೈಸರ್ಸ್ ಲಿಮಿಟೆಡ್ ಮತ್ತು ಎಸ್ ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಕಂಪನಿಗಳು ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ ಗಳಾಗಿ ಕಾರ್ಯ ನಿರ್ವಹಿಸಲಿವೆ ಅಥವಾ ಜವಾಬ್ದಾರಿ ಹೊರಲಿವೆ.