ನಾನು ಚುನಾವಣೆಯಲ್ಲಿ ಸೋತಿದ್ದೇನೆ : ಧೃಟಿಗೆಟ್ಟಿಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸೋಣ : ಮಾಜಿ ಉಪಮುಖ್ಯಮಂತ್ರಿ ಕಾರಜೋಳ

ಮುಧೋಳ : ನಾನು ಚುನಾವಣೆಯಲ್ಲಿ ಸೋತಿದ್ದೇನೆ. ಆದರೆ ಆ ಸೋಲಿನಿಂದ ಧೃತಿಗಟ್ಟಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯೋಣ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಅವರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಲಾಗಿದ್ದ ತಾಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಪಿಕೆಪಿಎಸ್ ಚುನಾವಣೆಯಲ್ಲಿ ಆಯ್ಕೆಯಾದವರಿಗೆ ಸನ್ಮಾನ ಹಾಗೂ ನನ್ನ ದೇಶ, ನನ್ನ ಮಣ್ಣು ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. “ನಾನು ಯಾವುದೇ ತರಹದ ಕೆಟ್ಟ ಮಾಡಿಲ್ಲ.
ಕ್ಷೇತ್ರದ ಜನತೆ ತಲೆತಗ್ಗಿಸುವಂತಹ ಲಜ್ಜೆಗೆಟ್ಟ ಕಾರ್ಯವನ್ನೂ ಮಾಡಿಲ್ಲ. ಅಭಿವೃದ್ಧಯನ್ನೇ ಉಸಿರಾಗಿಸಿಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದೆ. ಅದರೆ ಜನತೆ ಅಭಿವೃದ್ಧಿಗೆ ನಮಗೆ ಸಂಬಂಧ ಇಲ್ಲವೆಂಬಂತೆ ನನ್ನನ್ನು ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಗೆದ್ದು ನಿರಾಶೆ ದೂರ ಮಾಡೋಣ. ಮುಂದಿನ ವಿಧಾನಸಭೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ. ಪ್ರಧಾನಿ ಮೋದಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಬಿಜೆಪಿ ಬಹುಮತದೊಂದಿಗೆ ಕೇಂದ್ರದ ಅಧಿಕಾರದ ಚುಕ್ಕಾಣಿ ಹಿಡಿಯವುದು ಖಚಿತ ಎಂದು ವಿಶ್ವಾಸದಿಂದ ಹೇಳಿದರು
. ಎಸ್.ನಿಜಲಿಂಗಪ್ಪ ಅವರು ಪ್ರಧಾನ ಮಂತ್ರಿಯಾಗುವ ನಿರೀಕ್ಷೆಯಲ್ಲಿದ್ದರು. ಅವರನ್ನು ಕಾಂಗ್ರೆಸ್ ಮುಂದೆ ಬಿಡಲಿಲ್ಲ. ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಹೇಳಿ ಕಾಂಗ್ರೆಸ್ ಮತ ಗಳಿಸಿತು. ಬಿಜೆಪಿಯಲ್ಲಿ ಲಿಂಗಾಯತರನ್ನು ನಮ್ಮ ಮನೆಯವರಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು
“ನನ್ನ ದೇಶ ನನ್ನ ಮಣ್ಣು” ಅಭಿಯಾನದ ಜಿಲ್ಲಾ ಪ್ರಮುಖ ನಂದು ಗಾಯಕವಾಡ ಮಾತನಾಡಿದರು. ಗ್ರಾಮೀಣ ಘಟಕದ ಅಧ್ಯಕ್ಷ ಹಣಮಂತ ತುಳಸಿಗೇರಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.