Belagavi News In Kannada | News Belgaum

ಆರೋಗ್ಯ ವೃದ್ಧಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ: ಸುರೇಶ ಯಾದವ

ಸೈಕ್ಲಿಂಗ್ ಮತ್ತು ಕ್ರಾಸ್‌ ಕಂಟ್ರಿ ಸ್ಪರ್ಧೆಗಳಿಗೆ ಚಾಲನೆ ನೀಡಿದ ಸುರೇಶ ಯಾದವ

ಬೆಳಗಾವಿ:  ಜಿಲ್ಲಾ ಪದವಿಪೂರ್ವ ಇಲಾಖೆ ಹಾಗೂ ಎಕ್ಸ್ಪರ್ಟ್ ಪಿಯುಸಿ ಕಾಲೇಜ್ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ   ಪಿಯುಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ  ಸೈಕ್ಲಿಂಗ್   ಮತ್ತು ಕ್ರಾಸ್‌  ಕಂಟ್ರಿ  ಸ್ಪರ್ಧೆಗಳಿಗೆ   ಶ್ರೀ ಸುರೇಶ ಪೌಂಡೆಶನ್ ಅಧ್ಯಕ್ಷ   ಸುರೇಶ ಯಾದವ ಚಾಲನೆ ನೀಡಿದರು.

ಈ ವೇಳೆ  ಶ್ರೀ ಸುರೇಶ ಪೌಂಡೆಶನ್ ಅಧ್ಯಕ್ಷ   ಸುರೇಶ ಯಾದವ ಅವರು ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಆರೋಗ್ಯ ವೃದ್ಧಿಯಾಗಲು ಸಾಧ್ಯ. ಸೈಕ್ಲಿಂಗ್ , ಕ್ರಾಸ್‌   ಕಂಟ್ರಿ   ಸ್ಪರ್ಧೆಗಳು ಯುವಕರಿಗೆ  ತುಂಬಾ ಉಪಯುಕ್ತವಾದ ಕ್ರೀಡೆಗಳು ಎಂದು ಹೇಳಿದರು.

ಇಂದಿನ  ಮಕ್ಕಳಲ್ಲಿ ಸ್ಪೋರ್ಟ್ಸ್ ದ ಬಗ್ಗೆ ಕಾಳಜಿ ಇಲ್ಲವಾಗಿದೆ, ದಿನದ ನಾಲ್ಕೈದು ಗಂಟೆ  ಮೊಬೈಲ್ ಜತೆಗೆ ಅಂಟಿಕೊಂಡು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ.   ಇಂತ ಸಮಯದಲ್ಲಿ ಇಲಾಖೆ ಮತ್ತು ಕಾಲೇಜದವರು ಸೈಕ್ಲಿಂಗ್ ಸ್ಪರ್ಧೆ ಏರ್ಪಡಿಸಿರುವುದು ಒಳ್ಳೆಯ ವಿಚಾರ, ಸೈಕಲನ್ನು ನಿಯಮಿತವಾಗಿ ಮಾಡುವುದರಿಂದ ನಮ್ಮ ಉಸಿರಾಟವು ಸುಧಾರಿಸುತ್ತದೆ.   ಹೃದಯ ಮತ್ತು ಉಸಿರಾಟದ ತೊಂದರೆಗಳು ದೂರವಾಗುತ್ತವೆ.  ಸೈಕಲಿಂಗ ವೇಗವಾಗಿ ಕೊಬ್ಬನ್ನು ಕರಗಿಸುತ್ತದೆ. ಮತ್ತು ತೂಕವನ್ನು ವೇಗವಾಗಿ ಕಳೆದುಕೊಳಲು ಸಹಾಯ ಮಾಡುತ್ತದೆ. ಅಧಿಕ ತೂಕದಿಂದ ಬಳಲುತ್ತಿರುವವರಿಗೆ ಸೈಕ್ಲಿಂಗ್ ತುಂಬಾ ಪ್ರಯೋಜನಕಾರಿಯಾಗಿದೆ  ಎಂದರು.

ಈ ಸಮಾರಂಭದಲ್ಲಿ  ಪ್ರಭು ಶಿವನಾಯಕರ,   ಜಿ. ಎನ್. ಪಾಟೀಲ್,   ಎಸ್. ಟಿ. ಪಾಟೀಲ್ ಹಾಗೂ ಎಕ್ಸ್ಪರ್ಟ್ ಕಾಲೇಜಿನ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು