Belagavi News In Kannada | News Belgaum

ವಾಹನದ ಮುಂದೆ ನಿಂತು ರೀಲ್ಸ್; ಪೊಲೀಸ್ ಪೇದೆ ಸಸ್ಪೆಂಡ್.

ಹುಬ್ಬಳ್ಳಿ: ರೀಲ್ಸ್ ಹುಚ್ಚು ಪೊಲೀಸ್ ಸಿಬ್ಬಂದಿಯನ್ನೂ ಬಿಟ್ಟಿಲ್ಲ. ಪೊಲೀಸ್ ಸಿಬ್ಬಂದಿಯೊಬ್ಬರು ಪೊಲೀಸ್ ವಾಹನದ ಮುಂದೆ ನಿಂತು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಸ್ಪೆಂಡ್ ಆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ..

 

ಬಸು ಮಣ್ಣೂರ ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿ. ಹುಬ್ಬಳ್ಳಿಯ ಕಸಬಾಪೇಟೆ ಠಾಣೆ ಸಿಬ್ಬಂದಿಯಾಗಿದ್ದ ಬಸು ಮಣ್ಣೂರ, ಪೊಲೀಸ್ ವಾಹನದ ಮುಂದೆ ನಿಂತು ಅವಾಚ್ಯ ಶಬ್ದ ಬಳಸಿ ಡೈಲಾಗ್ ಹೊಡೆದು ಬಿಲ್ಡಪ್ ಕೊಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು..

 

ಅಲ್ಲದೇ ಬಸು ಮಣ್ಣೂರು ವಿರುದ್ಧ ಜಮೀನು ಕಬಳಿಸಿದ ಆರೋಪವೂ ಕೇಳಿ ಬಂದಿತ್ತು. ಇದೀಗ ರೀಲ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸು ಮಣ್ಣೂರು ಅವರನ್ನು ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದಾರೆ..