Belagavi News In Kannada | News Belgaum

ಹೃದಯಘಾತದಿಂದ ಎಎಸ್‌ಐ ಸಾವು…

ಚಿಕ್ಕಮಗಳೂರು: ಹೃದಯಘಾತದಿಂದ ಪೊಲೀಸ್‌ ಅಧಿಕಾರಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಕಳಸ ಠಾಣೆಯ ಎಎಸ್‌ಐ ಜಿ.ಕೆ ಮುರಳೀಧರ್ ಹೃದಯಾಘಾತಕದಿಂದ ಸಾವನ್ನಪ್ಪಿದ್ದಾರೆ..

 

ಜಿ.ಕೆ ಮುರಳೀಧರ್ ಅವರು ಕರ್ತವ್ಯ ಮುಗಿಸಿ ಮನೆಯಲ್ಲಿದ್ದಾಗ ಬೆಳಗ್ಗಿನ ಜಾವ ಎದೆನೋವು ಕಾಣಿಸಿಕೊಂಡಿದೆ.

ಕುಟುಂಬಸ್ಥರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಳಸದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಿ.ಕೆ ಮುರಳೀಧರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ..

 

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ನಗರ ಕಳಸ ಠಾಣೆಯ ಎಎಸ್‌ಐ ಜಿ.ಕೆ ಮುರಳೀಧರ್ ಅವರ ಅಗಲಿಕೆಗೆ ಜಿಲ್ಲಾ ಪೊಲೀಸ್‌ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.