ಮುಚ್ಚಿ ಹೋಗಿದ್ದ ಕೊಲೆ ಪ್ರಕರಣ ಬೇಧಿಸಿದ ಸವದತ್ತಿ ಪೊಲೀಸರು
ಸವದತ್ತಿ: ಆಸ್ತಿಗಾಗಿ ತಮ್ಮನನ್ನೇ ಕೊಂದ ಅಣ್ಣ

ಸವದತ್ತಿ: ಆಸ್ತಿಗಾಗಿ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವಂತಹ ಘಟನೆ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ನಡೆದಿತ್ತು. ಮುಚ್ಚಿ ಹೋಗಿದ್ದ ಕೊಲೆ ಪ್ರಕರಣವನ್ನು ಸದ್ಯ ಸವದತ್ತಿ ಪೊಲೀಸರು ಬೇಧಿಸಿದ್ದಾರೆ..
ಅಣ್ಣ ಸಿದ್ದಪ್ಪ ಅಳಗೋಡಿಯಿಂದ ತಮ್ಮ ಮಹಾಂತೇಶ್ ಅಳಗೋಡಿಯನಗನು ಕೊಲೆ (42) ಮಾಡಲಾಗಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಾಬು ಲಮಾಣಿ ಜತೆಗೆ ಸೇರಿ ಹತ್ಯೆ ಮಾಡಲಾಗಿದೆ. ಬಾಬು ಕಡೆಯಿಂದ ತಮ್ಮ ಮಹಾಂತೇಶ್ನನ್ನು ಅಣ್ಣ ಕರೆಯಿಸಿಕೊಂಡಿದ್ದು, ಕುಡಿಸಿ ನಂತರ ಕತ್ತಿಗೆ ಟವೆಲ್ ನಿಂದ ಬಿಗಿದು ಕೊಲೆ ಮಾಡಲಾಗಿದೆ. ಬಳಿಕ ಕಾಲುವೆ ಬಳಿ ಶವ ಎಸೆದು, ಬೈಕ್ ಬೀಳಿಸಿ ಅಪಘಾತ ಸಂಭವಿಸಿದೆ ಎನ್ನುವ ರೀತಿ ಮಾಡಿದ್ದಾರೆ..
ಮೊದಲು ಅಪಘಾತ ಅಂತಾ ದೂರು ದಾಖಲಿಸಿಕೊಂಡಿದ್ದ ಸವದತ್ತಿ ಪೊಲೀಸರು, ಕತ್ತಲ್ಲಿ ಕಪ್ಪಾದ ಗುರುತು ಕಂಡು ಅನುಮಾನಗೊಂಡಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಅಂತಾ ಸಾಬೀತಾಗಿದೆ. ಮನೆ ಕೆಲಸದವನನ್ನ ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಹಿರಂಗವಾಗಿದೆ..
ಅಣ್ಣ ಸಿದ್ದಪ್ಪನ ಜತೆಗೆ ಸೇರಿಕೊಂಡು ಕೊಲೆ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದಾರೆ. ಸಿದ್ದಪ್ಪನ ಬಂಧಿಸಿ ವಿಚಾರಣೆ ನಡೆಸಿದಾಗ ಆಸ್ತಿಗಾಗಿ ಕೊಲೆ ಮಾಡಲಾಗಿದೆ. ಸದ್ಯ ಸಿದ್ದಪ್ಪ ಮತ್ತು ಬಾಬು ಲಮಾಣಿ ಬಂಧಿಸಿ ಸವದತ್ತಿ ಪೊಲೀಸರು ಜೈಲಿಗಟ್ಟಿದ್ದಾರೆ..