ನಿರಂತರ ಅತ್ಯಾಚಾರ: ತಂದೆಯನ್ನೇ ಗುಂಡಿಕ್ಕಿ ಕೊಂದ ಮಗಳು.
ನಿರಂತರ ಅತ್ಯಾಚಾರ: ತಂದೆಯನ್ನೇ ಗುಂಡಿಕ್ಕಿ ಕೊಂದ ಮಗಳು........

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 14 ವರ್ಷದ ಬಾಲಕಿಯೊಬ್ಬಳು ಮೂರು ತಿಂಗಳ ಕಾಲ ಅನೇಕ ಬಾರಿ ಅತ್ಯಾಚಾರವೆಸಗಿದ ತನ್ನ ತಂದೆಯನ್ನೇ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ..
ಪೊಲೀಸರ ಪ್ರಕಾರ, ಲಾಹೋರ್ ನಗರದ ಗುಜ್ಜರ್‌ಪುರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ.
ಕಳೆದ ಮೂರು ತಿಂಗಳಿನಿಂದ ತನ್ನ ತಂದೆ ತನ್ನ ಮೇಲೆ ಹೇಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ಭಯಾನಕ ವಿವರಗಳನ್ನು ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ವಿವರಿಸಿದ್ದಾಳೆ. .
ದೌರ್ಜನ್ಯದಿಂದ ಬೇಸತ್ತು ತನ್ನ ಅತ್ಯಾಚಾರಿ ತಂದೆಯನ್ನು ಕೊಲ್ಲಲು ನಿರ್ಧರಿಸಿದೆ ಎಂದು ಅಪ್ರಾಪ್ತ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ..
“ತಾನು ನರಕವನ್ನು ಅನುಭವಿಸುತ್ತಿರುವುದಾಗಿ ಹೇಳಿದಳು ಮತ್ತು ತನ್ನ ಅತ್ಯಾಚಾರಿ ತಂದೆಯನ್ನು ಕೊಲ್ಲಲು ನಿರ್ಧರಿಸಿ ಆತನನ್ನು ತನ್ನ ಬಂದೂಕಿನಿಂದ ಹೊಡೆದು ಕೊಂದಳು” ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಸೊಹೈಲ್ ಕಾಜ್ಮಿ ಹೇಳಿದ್ದಾರೆ..
ಬಾಲಕಿಯ ತಂದೆ ಬಿಲಾಲ್ ಖಾನ್ ವೃತ್ತಿಯಲ್ಲಿ ಟೈಲರ್ ಆಗಿದ್ದು, ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದಾಗ ಖಾನ್ ಮಗಳು ತಂದೆಯ ತಲೆಗೆ ಗುಂಡು ಹಾರಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ “ಎಲ್ಲಾ ಅಂಶಗಳ ತನಿಖೆಯ ನಂತರ ಶಂಕಿತನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುವುದು” ಎಂದು ಅಧಿಕಾರಿ ಹೇಳಿದರು..