ಅಕ್ರಮವಾಗಿ ಗಡಿ ನುಸುಳಿದ ಪಾಕ್ ಪ್ರಜೆ ಬಂಧನ

ಶ್ರೀನಗರ: ಅಕ್ರಮವಾಗಿ ಗಡಿ ನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ ಗುಜರಾತ್‌ನಲ್ಲಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ನಿವಾಸಿ ಮೆಹಬೂಬ್ ಅಲಿ (30) ಎಂಬಾತನನ್ನು ಬಂಧಿಸಲಾಗಿದೆ. ಬಿಎಸ್‌ಎಫ್ ಪ್ರಕಾರ, ಸೆಪ್ಟೆಂಬರ್ 23ರಂದು ಭದ್ರತಾ ಪಡೆ ಗಸ್ತು ತಿರುಗುತ್ತಿದ್ದ ವೇಳೆ ಭಾರತ-ಪಾಕಿಸ್ತಾನ ಗಡಿಯ ಬಳಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿತು..
ತಕ್ಷಣ ಭದ್ರತಾ ಪಡೆ ಗಡಿ ಬಳಿ ತೆರಳಿ ಪಾಕಿಸ್ತಾನದ ಪ್ರಜೆಯನ್ನು ಬಂಧಿಸಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.