Belagavi News In Kannada | News Belgaum

ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ

10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಅರ್ಜಿ ಅಹ್ವಾನ

ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ

ಬೆಳಗಾವಿ, ಸೆ.27 : ಕುಡಚಿ ರೈಲ್ವೆ ನಿಲ್ದಾಣದ ಬಳಿ ಯಾರ್ಡನ ಚಲಿಸುತಿರುವ ರೈಲಿಗೆ ಸಿಕ್ಕು ಸೆಪ್ಟೆಂಬರ್.9 2023 ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುತ್ತದೆ.


ಸದರಿ ವ್ಯಕ್ತಿಯ ವಯಸ್ಸು ಅಂದಾಜು 55 ರಿಂದ 60 ವರ್ಷವಿದ್ದು, ಎತ್ತರ 5,7 ಇಂಚ, ಕೆಂಪು ಮೈ ಬಣ್ಣ, ಸದೃಡ ಮೈಕಟು , ಉದ್ದು ಮುಖ, ನೆಟ್ಟನೆಯ ಮೂಗು ,ಹಾಗೂ ಬಿಳಿ ಮತ್ತು ಬಣ್ಣದ ಚಕ್ಸ್ ಹಾಪ್ ಶರ್ಟ, ನಾಶಿ ಬಣ್ಣದ ಪುಲ್ ಪ್ಯಾಂಟ್, ಧರೆಸಿರುತ್ತಾನೆ.


ಈ ರೀತಿ ಚಹರೆಯುಳ್ಳ ಮೃತನ ರಕ್ತ ಸಂಬಂಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿ ರೈಲ್ವೆ ಪೆÇೀಲಿಸ್ ಠಾಣಿ ದೂರವಾಣಿ ಸಂಖ್ಯೆ: (0831) 2405273 ಪಿ.ಎಸ್.ಐ ಮೊಬೈಲ ನಂ:9480802127 ಅಥವಾ ರೈಲ್ವೆ ಪೆಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. (080) 22871291 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೆÇಲೀಸ್ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

“ಕಾಲುಬಾಯಿ ರೋಗ ಮುಕ್ತ ಗ್ರಾಮ”ವನ್ನಾಗಿಸಿ: ಮಂಗಲ ಸುರೇಶ ಅಂಗಡಿ


ಬೆಳಗಾವಿ, ಸೆ.27 : ರೈತರು ತಮ್ಮ ಜಾನುವಾರುಗಳಿಗೆ ಉಚಿತವಾಗಿ ಕಾಲುಬಾಯಿ ರೋಗದ ವಿರುದ್ಧ ಲಸಿಕೆಯನ್ನು ಹಾಕಿಸಿ ರೋಗ ಬರದಂತೆ ಜಾನುವಾರುಗಳನ್ನು ರಕ್ಷಿಸಿ, ತಮ್ಮ ಗ್ರಾಮವನ್ನು “ಕಾಲುಬಾಯಿ ರೋಗ ಮುಕ್ತ ಗ್ರಾಮ”ವನ್ನಾಗಿಸಿ ಎಂದು ಲೋಕ ಸಭಾ ಸದಸ್ಯರಾದ ಮಂಗಲ ಸುರೇಶ ಅಂಗಡಿ, ಅವರು ಗೋಪೂಜೆಯನ್ನು ನೇರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲೆಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಕಾರ್ಯಕ್ರಮ 4 ನೇ ಸುತ್ತಿನ ಕಾಲುಬಾಯಿ ಬೇನೆ ವಿರುದ್ಧ ಲಸಿಕೆ ಹಾಕುವ ಅಭಿಯಾನದ ಉದ್ಘಾಟಣಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 26, 2023 ರಂದು ಬೆಳಗಾವಿಯ ಪಶು ಆಸ್ಪತ್ರೆ, ಆವರಣದಲ್ಲಿ ಆಯೋಜಿಸಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ಉಪ ನಿರ್ದೇಶಕರು(ಆ) ಡಾ// ರಾಜೀವ ಎನ್, ಕೂಲೇರ, ಡಾ// ಹೆಚ್.ಕೆ.ಯರಗಟ್ಟಿ. ಡಾ// ಆನಂದ ಪಾಟೀಲ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು(ಆ) ಹಾಜರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಗಣೇಶ ಹಬ್ಬದ ಪ್ರಯುಕ್ತ: ನಗರದ ವಿವಿಧ ಪ್ರದೇಶಗಳಲ್ಲಿ ಶಾಖಾಧಿಕಾರಿಗಳ ನಿಯೋಜನೆ

 

ಬೆಳಗಾವಿ, ಸೆ.27  : 2023-24 ನೇ ಬೆಳಗಾವಿ ನಗರದಲ್ಲಿ 2023-24 ನೇ ಸಾಲಿನ ಗಣೇಶ ಹಬ್ಬದ ಪ್ರಯುಕ್ತ ಕಾರ್ಯ ಮತ್ತು ಪಾಲನಾ ನಗರ ವಿಭಾಗದ ಹೆಸ್ಕಾಂ ವ್ಯಾಪ್ತಿಯಲ್ಲಿ ಜರುಗುವ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲು ಹಾಗೂ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಕಾರ್ಯ ಮತ್ತು ಪಾಲನಾ ನಗರ ವಿಭಾಗದ ಶಾಖೆಯ ವಿವಿಧ ಶಾಖಾಧಿಕಾರಿಗಳು ಹಾಗೂ ಮೇಲುಸ್ತುವಾರಿ ಅಧಿಕಾರಿಗಳನ್ನು ಕಾರ್ಯವ್ಯಾಪ್ತ್ತಿವಾರು ನಿಯೋಜಿಸಲಾಗಿದೆ.


ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಾಗೂ ಕಾರ್ಯ ವ್ಯಾಪ್ತಿಯ ಸ್ಥಳ
ಬೆಳಗಾವಿ ನಗರ ಉಪವಿಭಾಗ (1) ವ್ಯಾಪ್ತಿಯ ಕಾಕತಿವೇಸ ರಸ್ತೆ, ಖಡಕ ಗಲ್ಲಿ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾಧೇವ ಗಲ್ಲಿ, ಬೋಗಾರವೇಸ್, ರಾಮಲಿಂಗಖಿಂಡ ಗಲ್ಲಿ, ಶನಿ ಮಂದಿರ ರಸ್ತೆ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಮೇಲುಸ್ತುವಾರಿಯಾದ ಸ.ಕಾ.ನಿ.ಇಂ(ವಿ) ಸಂಜೀವ ಜಿ. ಹಮ್ಮನ್ನವರ ಮೊ.ಸಂ 9480881987 ಹಾಗೂ ಕಿರಿಯ ಇಂಜಿನಿಯರ್

 

 ಸಿದ್ರಾಮ್ ಕಾಂಬಳೆ ಮೊ. ಸ 9480881992 ಗೆ ಹಾಗೂ ಸುಭಾಷ ಗಲ್ಲಿ, ದುರ್ಗಾ ಮಾತಾ ರಸ್ತೆ, ಗಾಂಧಿ ನಗರ, ಶೆಟ್ಟಿ ಗಲ್ಲಿ, ಖಡೇ ಬಜಾರ್, ಚವಾಟ್ ಗಲ್ಲಿ, ಬಡಕಲ್ ಗಲ್ಲಿ,
ಬಸವನ ಕುಡಚಿ, ಕೋಟೆ ಕೆರೆ, ಮಾಧವಾ ರೋಡ, ತಾನಾಜಿ ಗಲ್ಲಿ, ಹಳೇ ಬೆಳಗಾವಿ, ಲಕ್ಮ್ಷೀ ನಗರ, ಖಾಸಬಾಗ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಮೇಲುಸ್ತುವಾರಿಯಾದ ಸ.ಕಾ.ನಿ.ಇಂ(ವಿ) ಸಂಜೀವ ಜಿ. ಹಮ್ಮನ್ನವರ ಮೊ.ಸಂ 9480881987 ಹಾಗೂ ಸಹಾಯಕ ಇಂಜಿನಿಯರ್ ಸಿದ್ದಲಿಂಗಪ್ಪ ಅಂಗಡಿ ಮೊ. ಸಂ 9480881993 ಗೆ ಸಂಪರ್ಕಿಸಬಹುದಾಗಿದೆ.


ಬೆಳಗಾವಿ ನಗರ ಉಪವಿಭಾಗ (2) ವ್ಯಾಪಿಯ ಕಪಲೇಶ್ವರ ಹೊಂಡ ಒಂದು ಮತ್ತು ಎರಡು, ಮಹಾತ್ಮ ಪುಲೇ ರಸ್ತೆ, ಶಹಾಪುರ ಮುಖ್ಯ ರಸ್ತೆ, ನಾಥ ಪೈ ರಸ್ತೆ, ವಡಗಾಂವ ಮುಖ್ಯ ರಸ್ತೆ, ಆನಂದವಾಡಿ, ಯಳ್ಳೂರು ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಮೇಲುಸ್ತುವಾರಿಯಾದ ಸ.ಕಾ.ನಿ.ಇಂ(ವಿ) ವಿನೋದ ವಿ.ಕರೂರ ಮೊ. ಸಂ 9448370244 ಹಾಗೂ ಸಹಾಯಕ ಇಂಜಿನಿಯರ್ ಪ್ರವೀಣ ಬರಗಾಲೆ ಮೊ. ಸಂ 9480881994, ಭಾಗ್ಯ ನಗರ, ಹಿಂದವಾಡಿ, ಗೋವಾವೇಸ್, ಆರ್.ಪಿ.ಡಿ.ಕಾರ್ನರ್, ತಿಳಕವಾಡಿ, ಚನ್ನಮ್ಮ ನಗರ, ಜಕ್ಕೇರಿ ಹೊಂಡ, ಅನುಗೋಳ ಮುಖ್ಯ ರಸ್ತೆ, ಅನುಗೋಳ, ವಿಧ್ಯಾನಗರ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು.

 

 ಸಹಾಯಕ ಇಂಜಿನಿಯರ್ ವೆಂಕಟೇಶ ಎಲ್. ಕಳ್ಳಿಮನಿ ಮೊ. ಸಂ 9480881995, ನಾನಾವಾಡಿ, ಪಾಪಮಾಳ, ಮರಾಠಾ ಕಾಲೋನಿ, ರಾಣಾ ಪ್ರತಾಪ ರೋಡ, ಮಹರ್ಷಿ ರೋಡ, ಕಾಂಗ್ರೇಸ್ ರೋಡ, ವ್ಯಾಕ್ಸಿನ್ ಡಿಪ್ಪೊ, ಚೌಗಲೆವಾಡಿ, ಭವಾನಿ ನಗರ, ಜೈತನಮಾಳ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಸಹಾಯಕ ಇಂಜಿನಿಯರ್ ಬಸಪ್ಪ ಹೈಬತಿ ಮೊ. ಸಂ 9480881996 ಹಾಗೂ ಉದ್ಯಮಬಾಗ, ಖಾನಾಪುರ ಮಖ್ಯ ರಸ್ತೆ, ಮಜಗಾಂವ, ಬ್ರಹ್ಮನಗರ, ಮಜಗಾಂವ ಕೆರೆ, ಬೆಮ್ಕೋ ಸರ್ಕಲ್ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಸಹಾಯಕ ಇಂಜಿನಿಯರ್ ಜಗದೀಶ ಎಮ್. ಮೊ. ಸಂ 9480881998 ಗೆ ಸಂಪರ್ಕಿಸಬಹುದಾಗಿದೆ.


ಬೆಳಗಾವಿ ನಗರ ಉಪವಿಭಾಗ (3) ವ್ಯಾಪ್ತಿಯ ನೆಹರು ನಗರ, ಗ್ಯಾಂಗ್ ವಾಡಿ, ಸುಭಾಷ ನಗರ, ಸದಾಶಿವ ನಗರ, ವಿಶ್ವೇಶ್ವರಯ್ಯ ನಗರ, ಶಿವಾಜಿ ನಗರ, ವೀರಭದ್ರ ನಗರ, ಚನ್ನಮ್ಮ ಸರ್ಕಲ್, ಕ್ಲಬ್ ರೋಡ್, ಕಾಲೇಜು ರೋಡ್, ಕಾಕತಿವೇಸ ಗಲ್ಲಿ, ಕಾಳಿಅಂಬ್ರಾಯಿ, ಕಂಗ್ರಾಳ ಗಲ್ಲಿ, ಗಣಾಚಾರಿ ಗಲ್ಲಿ, ಕೋರ್ಟ ಕಂಪೌಂಡ್. ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಮೇಲುಸ್ತುವಾರಿಯಾದ ಸ.ಕಾ.ನಿ.ಇಂ(ವಿ) ಅಶ್ವೀನ ಎಂ. ಶಿಂಧೆ ಮೊ. ಸಂ 9448094489 ಹಾಗೂ ಸಹಾಯಕ ಇಂಜಿನಿಯರ್ ಯಲ್ಲಪ್ಪ ನೇಸಕರ್ ಮೊ. ಸಂ 9480881997, ಮಹಾಂತೇಶ ನಗರ, ಶ್ರೀ ನಗರ, ರಾಮತೀರ್ಥ ನಗರ, ರುಕ್ಮಿಣಿ ನಗರ, ಕಣಬರ್ಗಿ, ಮುತ್ತ್ಯಾನಟ್ಟಿ, ಯಮುನಾಪುರ, ಬಸವನಕೋಳ, ಕಾಕತಿ, ಆಟೋ ನಗರ, ಆಂಜನೇಯ ನಗರ ವ್ಯಾಪ್ತಿಗೆ ಒಳಪಡುವ

 

 ಸಾರ್ವಜನಿಕರು ಸಹಾಯಕ ಇಂಜಿನಿಯರ್ ಶೀತಲ್ ಸನದಿ ಮೊ. ಸಂ 9480881998 ಹಾಗೂ ಶಾಹು ನಗರ, ವೈಭವ ನಗರ, ಬಸವ ಕಾಲೋನಿ, ಅಜಮ ನಗರ, ಎ.ಪಿ.ಎಮ್.ಸಿ. ರೋಡ, ಜ್ಯೋತಿ ನಗರ, ಮಾರ್ಕಂಡಯ್ಯ ನಗರ, ಅಂಬೇಡ್ಕರ್ ನಗರ, ಸಹ್ಯಾದ್ರಿ ನಗರ, ಸದಾಶಿವ ನಗರ ಲಾಸ್ಟ ಬಸ್ ಸ್ಟಾಪ್ ರಸ್ತೆ, ಹನುಮಾನ ನಗರ, ಯಮುನಾಪುರ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಸಹಾಯಕ ಇಂಜಿನಿಯರ್ ಧರ್ಮೇಂದ್ರ ಹಂದಿಗುಂದ ಮೊ. ಸಂ 9480882910 ಗೆ ಸಂಪರ್ಕಿಸಬಹುದಾಗಿದೆ ಎಂದು ಹು.ವಿ.ಸ.ಕಂ.ನಿ.ನಿ. ಕಾ ಮತ್ತು ಪಾ ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾತ್ಕಾಲಿಕ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

 

ಬೆಳಗಾವಿ, ಸೆ.27   : 2023-24 ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ವಿಶೇಷ ಚೇತನ ಮಕ್ಕಳಿಗಾಗಿ ಜಿಲ್ಲೆಯಲ್ಲಿ ಖಾಲಿ ಇರುವ ಪ್ರಾಥಮಿಕ (1 ರಿಂದ 5ನೇ ತರಗತಿ) ಹಂತಕ್ಕೆ 3 ಖಾಲಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರಗುತ್ತಿಗೆ ಅಡಿಯಲ್ಲಿ ವಿಶೇಷ ಡಿ.ಇಡ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಾಲಿ ಇರುವ ಹುದ್ದೆಗಳ ವಿವರ
ಬೆಳಗಾವಿ ನಗರ 1, ಬೆಳಗಾವಿ ಗ್ರಾಮೀಣ 1 ಹಾಗೂ ಖಾನಾಪುರನಲ್ಲಿ 1 ಒಟ್ಟು 3 ಖಾಲಿ ಹುದ್ದೆಗಳಿವೆ.
ಉಪನಿರ್ದೇಶಕರ ಕಚೇರಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು,ಸಮಗ್ರ ಶಿಕ್ಷಣ ಕರ್ನಾಟಕ ಬೆಳಗಾವಿ ಇವರಿಂದ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅ. 2 2023 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬಹುದಾಗಿದೆ.

 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳ ದೂರವಾಣಿ ಸಂಖ್ಯೆ 9448999386 ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಸಮಗ್ರ ಶಿಕ್ಷಣ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳು,ಶಾ. ಶಿ. ಇ ಹಾಗೂ ಪದನಿಮಿತ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಅರ್ಜಿ ಅಹ್ವಾನ

ಬೆಳಗಾವಿ, ಸೆ.27   : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮ ಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಅವರು ಸ್ವಂತ ಉದ್ಯೋಗವನ್ನು ಸ್ಥಾಪಿಸಲು ಇಚ್ಚಿಸುವವರಿಗಾಗಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
.ತರಬೇತಿಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು
ಸರ್ಕಾರದ ಸ್ವಂತಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾವರದಿ ತಯಾರಿಕೆ, ಹಾಗೂ ಉದ್ಯಮ ನಿರ್ವಹಣೆ, ಇತ್ಯಾದಿ ವಿಷಯಗಳ ತರಬೇತಿಯನ್ನು ನೀಡಲಾಗುವುದು, ಜಿಲ್ಲೆಯ ಆಸಕ್ತ ಅಭ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯಾರ್ಥಿಗಳು 18 ವರ್ಷ ದಿಂದ 40 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು.
ತರಬೇತಿಯನ್ನು ಅಕ್ಟೋಬರ್ ತಿಂಗಳದಲ್ಲಿ ಹಮ್ಮಿಕೊಳ್ಳಲಾಗುವುದು, ಅರ್ಜಿಯನ್ನು ಕಛೇರಿಯಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಿಡಾಕ್ ಜಂಟಿ ನಿರ್ದೇಶಕರ ಕಛೇರಿ ದೂರವಾಣಿ ಸಂಖ್ಯೆ: -8217707143, 9900915785 ಗೆ ಸಂರ್ಪಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲೆ ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///