Belagavi News In Kannada | News Belgaum

ಇಂದು ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ಮೌಲಾನಾ ಆಲಮ್ ಖಾನ ಅ.ದೇಸಾಯಿಯವರ ಅಭಿನಂದನಾ ಸಮಾರಂಭ

ಹುಕ್ಕೇರಿ: ಮಾರ್ಕಂಡೇಯ ಫೌಂಡೇಶನ್ ಪಾಶ್ಚಾಪೂರ ಇವರ ವತಿಯಿಂದ  ಇಂದು ಮುಂಜಾನೆ 10.30 ಗಂಟೆಗೆ ಮದರಸಾ ಕುತುಬ್ -ಉಲ್-ಉಲಮ್ ರುಸ್ತುಂಪುರ ದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಕುವೆಂಪು ವಿಶ್ವಮಾನವ ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ಮೌಲಾನಾ ಆಲಮ್ ಖಾನ ಅ.ದೇಸಾಯಿಯವರ ಅಭಿನಂದನಾ ಸಮಾರಂಭ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಶ್ರೀ.ಮ.ನಿ.ಪ್ರ.ಸ್ವ.ನಿಜಗುಣಾನಂದ ಮಹಾಸ್ವಾಮಿಗಳು ನಿಷ್ಕಲ ಮಂಟಪ ಬೈಲೂರ.ಶ್ರೀ ಷ.ಬ್ರ.ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಪಾಶ್ಚಾಪೂರ.ಶ್ರೀ ಮ.ನಿ.ಪ್ರ.ಸ್ವ ಅಮರಸಿದ್ದೇಶ್ವರ ಮಹಾಸ್ವಾಮಿಗಳು ಅಡವಿಸಿದ್ದೇಶ್ವರ ಮಠ ಅಂಕಲಗಿ -ಕುಂದರಗಿ ಮುಫ್ತಿ ಮೊಹ್ಮದಕಾಸೀಮ ಇಮಾಮ್ -ಓ-ಖತೀಬ ಶಾಹಿ ಮಸ್ಜೀದ.ಬೆಳಗಾವಿ.ಮೌಲಾನಾ ಸಲೀಮ ಅಧ್ಯಕ್ಷರು ಜಮಿಯತ ಉಲಾಮ ಹಿಂದೂ ಬೆಳಗಾವಿ.ಫಾದರ ಫ್ಯಾರಿ ವೀಕ್ಟರ ಡಿಸೋಜಾ ನೇಸರಗಿ.ಈ ಸಮಾರಂಭ ಉದ್ಘಾಟಕರು ಹಾಗೂ ಅಧ್ಯಕ್ಷರು ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರು ಮುಂತಾದ ಗಣ್ಯಮಾನ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಶ್ರೀ ಮೌಲಾನ ಆಲಮ್ ಖಾನ್ ಅ ದೇಸಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ