ಕಲುಷಿತ ನೀರು ಸೇವನೆ ಮರು ಚಿಕಿತ್ಸೆಗೆ ಬಂದ ಮಕ್ಕಳು.

ಕೆಂಭಾವಿ: ಸಮೀಪದ ಯಕ್ತಾಪೂರ ಗ್ರಾಮದ ಕಸ್ತುರಬಾ ಬಾಲಿಕಾ ವಸತಿ ನಿಲಯದ ವಿದ್ಯಾರ್ಥಿನಿಯರು ಶನಿವಾರ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಘಟನೆಗೆ ಸಂಬಂದಿಸಿದಂತೆ ರವಿವಾರ ಕೂಡ ಮೂರು ಜನ ವಿದ್ಯಾರ್ಥಿನೀಯರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರುದಾಖಲಾಗಿ ಚಿಕಿತ್ಸೆಗೆ ಒಳಪಟ್ಟ ಘಟನೆ ನಡೆದಿದೆ.
ಶನಿವಾರ ವಸತಿ ನಿಲಯದ ವಿದ್ಯಾರ್ಥಿನಿಯರು ಚಹಾ ಬಿಸ್ಕಟ್ ನೊಂದಿಗೆ ಕಲುಷಿತ ನೀರು ಸೇವನೆಯಿಂದ ಮಕ್ಕಳಿಗೆ ತಲೆ ಸುತ್ತು, ವಾಂತಿ ಬೇದಿ ಕಾಣಿಕೊಂಡಾಗ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆಗೊಳಪಟ್ಟ ಸುಮಾರು ಮೂವತ್ತಕ್ಕೂ ಅಧಿಕ ವಿದ್ಯಾರ್ಥಿನೀಯರಲ್ಲಿ ಇಂದು ದಾಖಲಾದ ಮೂರು ಜನ ವಿದ್ಯಾರ್ಥಿಯರು ಕೂಡ ಚಿಕಿತ್ಸೆ ಪಡೆದಿರುತ್ತಾರೆ. ಗುಣಮುಖರಾಗಿದ್ದಾರೆಂದು ತಿಳಿದು ರವಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಯಕ್ತಾಪುರದ ಕಸ್ತುರಬಾ ವಸತಿ ನಿಲಯಕ್ಕೆ ಮರಳಿರುತ್ತಾರೆ. ಆದರೆ ಮದ್ಯಾಹ್ನ 1 ಗಂಟೆ ಸುಮಾರಿಗೆ ವಿದ್ಯಾರ್ಥಿನಿಯರಿಗೆ ಮತ್ತೆ ತಲೆ ಸುತ್ತು, ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದ್ದು, ವಸತಿ ನಿಲಯದ ಮೇಲ್ವಿಚಾರಕರು ಮೂರೂ ಮಕ್ಕಳನ್ನು ಮರಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು ಮಕ್ಕಳು ಆಸ್ಪತ್ರೆಯಲ್ಲಿ ಮರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಂಭಾವಿ ಆಸ್ಪತ್ರೆಗೆ ರವಿವಾರ ಮೂರು ಮಕ್ಕಳು ಮರು ಚಿಕಿತ್ಸಗೆ ಬಂದಿರುವುದು ತಿಳಿದು ಬಂದಿದೆ, ಎಲ್ಲಾ ವಿದ್ಯಾರ್ಥಿನಿಯರಿಗೆ ಎಲ್ಲಾ ರೀತಿಯ ಮುಂಜಾಗೃತ ಕ್ರಮವಾಗಿ ಚಿಕಿತ್ಸೆ ಕೊಡಲಾಗಿದೆ, ಯಾವುದೆ ತೊಂದರೆ ಇರುವುದಿಲ್ಲ.ಡಾ. ಆರ್.ವಿ ನಾಯಕ, ಟಿಹೆಚ್ಓ ಸುರಪುರ