ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಜಿ. ಪರಮೇಶ್ವರ್..

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬಂದರೆ ಅವರನ್ನು ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ..
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಿಎಂ ಇಬ್ರಾಹಿಂ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಬ್ರಾಹಿಂ ಈಗಾಗಲೇ ಹೇಳಿದ್ದಾರೆ. ನನ್ನ ಗಮನಕ್ಕೆ ಬಾರದೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ನಾನು ಅಧ್ಯಕ್ಷ ಇದ್ದೇನೆ. ನನ್ನ ಗಮನಕ್ಕೆ ಬಾರದೇ ತೀರ್ಮಾನ ಮಾಡಿಕೊಂಡಿದ್ದಾರೆ..
ನನಗೆ ಬೇಸರ ಇದೆ ಅಂತ ಹೇಳಿದ್ದಾರೆ. ಅಕ್ಟೋಬರ್ 16 ಕ್ಕೆ ಸಭೆ ಕರೆದಿದ್ದೇನೆ. ಏನಾದರೂ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲಿಯವರೆಗೂ ಕಾದು ನೋಡೋಣ ಎಂದರು..
ಇಬ್ರಾಹಿಂ ಅವರು ಕಾಂಗ್ರೆಸ್‌ಗೆ ಬರೋದಾದರೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರು ವಾಪಸ್ ಬರ್ತೀನಿ, ಕಾಂಗ್ರೆಸ್‌ನಲ್ಲಿ ಮುಂದುವರಿಯುತ್ತೇನೆ ಅಂದರೆ ನನ್ನ ಹೈಕಮಾಂಡ್ ಪರಿಶೀಲನೆ ಮಾಡಿ ಅವರಿಗೊಂದು ಅವಕಾಶ ಕೊಡಬಹುದು. ನಾವು ಯಾವತ್ತು ವಿರೋಧ ಮಾಡಲ್ಲ ಎಂದು ತಿಳಿಸಿದರು..
ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರು ನಾವು ವಿರೋಧ ಮಾಡಲ್ಲ. ಕಾಂಗ್ರೆಸ್ ಸಿದ್ಧಾಂತಕ್ಕೆ ಹೊಂದಿಕೊಳ್ಳಬೇಕು. ನಾವು ಬಡವರ ಪರವಾಗಿ ಸಾಮಾಜಿಕ ನ್ಯಾಯದ ಪರ ಕಾಂಗ್ರೆಸ್ ಇದೆ. ಅದನ್ನು ಒಪ್ಪಿ ಯಾರೇ ಬಂದರು ಅವರಿಗೆ ಸ್ವಾಗತ ಮಾಡುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಇಬ್ರಾಹಿಂಗೆ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದರು..