Belagavi News In Kannada | News Belgaum

ಕಡೋಲಿ ಖೋಖೋ ತಂಡ ದಸರಾ ಕ್ರೀಡಾಕೂಟದ ವಿಭಾಗ ಮಟ್ಟಕ್ಕೆ ಆಯ್ಕೆ

ಬೆಳಗಾವಿ: ಇಲ್ಲಿನ  ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ  ಜಿಲ್ಲಾ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಕಡೋಲಿ ಖೋಖೋ ತಂಡ ಪ್ರಥಮ ಸ್ಥಾನ  ಪಡೆದು ದಸರಾ ಕ್ರೀಡಾಕೂಟದ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ…

ವಿಭಾಗ ಮಟ್ಟಕ್ಕೆ ಆಯ್ಕೆಯಾದ ಯಮಕನಮರಡಿ ಕ್ಷೇತ್ರದ  ಕಡೋಲಿ  ಜಿಪಂ ಜಾಪರವಾಡಿ ಗ್ರಾಮದ ಖೋಖೋ ತಂಡಕ್ಕೆ  ಸಚಿವ ಸತೀಶ ಜಾರಕಿಹೊಳಿ ಅವರು ಆರ್ಥಿಕ ನೆರವು ನೀಡಿ,  ಶುಭಹಾರೈಸಿದ್ದಾರೆ…

ಇಂದಿನಿಂದ ಐದು ದಿನಗಳವರೆಗೆ ವಿಭಾಗ ಮಟ್ಟದ ಕ್ರೀಡಾಕೂಟ ನಡೆಯಲಿದ್ದು, ಕಾರವಾರ  ಜಿಲ್ಲೆಯ ಮುಂಡಗೋಡ ತಾಲೂಕಿನ ಕ್ರೀಡಾಂಗಣದಲ್ಲಿ ಜರುಗಲಿರುವ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬೆಳಗಾವಿ ತಂಡಗಳು ಖೋಖೋ ಹಾಗೂ ಥ್ರೋಬಾಲ್‌ ಸ್ಪರ್ಧೆ ನಡೆಯಲಿದೆ.ಈ ಕ್ರೀಡಾಕೂಟದಲ್ಲಿ ಆಯ್ಕೆಯಾದ ತಂಡವು ದಸರಾ ಕ್ರೀಡಾಕೂಟದಲ್ಲಿ ಸೆಣಸಾಟ ನಡೆಸಲಿದೆ…

 

ತರಬೇತಿದಾರ ಎನ್‌ ಆರ್‌ ಪಾಟೀಲ ಮಾತನಾಡಿ, ಗ್ರಾಮದ ಮಕ್ಕಳು ವಿಭಾಗ ಮಟ್ಟಕ್ಕೆಆಯ್ಕೆಯಾಗಿದ್ದು ಹೆಮ್ಮೆಯ ವಿಷಯ, ದಸರಾ ಕ್ರೀಡಾಕೂಟದಲ್ಲಿ ಗೆದ್ದು ಬೆಳಗಾವಿ ಕೀರ್ತಿ ಹೆಚ್ಚಿಸಬೇಕು ಎಂದು ಅಭಿನಂದನೆ ಸಲ್ಲಿಸಿದ್ದಾರೆ…

 

ಈ ಸಂದರ್ಭದಲ್ಲಿ   ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲಗೌಡ ಪಾಟೀಲ,   ಯುವ ಸಬಲೀಕರಣ ಕ್ರೀಡಾ ಇಲಾಖೆ ಉಪನಿರ್ದೇಶಕರಾದ  ಬಿ. ಶ್ರೀನಿವಾಸ,    ಯಲ್ಲಪ್ಪ ಬಡಕನ್ನವರ, ತರಬೇತಿದಾರ ಎನ್‌ ಆರ್‌ ಪಾಟೀಲ    ಹಾಗೂ ಇತರರು ಇದ್ದರು…