ನಗರ ಕೇಂದ್ರ ಗ್ರಂಥಾಲಯದಲ್ಲಿ ಗಾಂಧಿ ಜಯಂತಿ ಆಚರಣೆ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಅಕ್ಟೋಬರ್ 2 ರಂದು ರಾಷ್ಟ್ರಪಿತ, ಮಹಾತ್ಮಾ ಗಾಂಧೀಜಿ ಜಯಂತಿಯನ್ನು ಆಚರಿಸಲಾಯಿತು.ಉಪನಿರ್ದೇಶಕರಾದ ಶ್ರೀ ರಾಮಯ್ಶಾ ಅವರು ಪೂಜೆ ನೆರವೇರಿಸಿ,ಗಾಂಧೀಜಿ ಅವರ ತತ್ವ, ಆದರ್ಶಗಳನ್ನು ನೆನೆದರು.ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೇಲ್ಲ ನಡೆಯೋಣ ಎಂದರು.ಇನ್ನೋರ್ವ ಮಹಾನ್ ಚೇತನ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೂ ಗೌರವ ಸಲ್ಲಿಸಲಾಯಿತು.
ಅಧೀಕ್ಷಕರಾದ ಎ ಎ ಕಾಂಬಳೆ, ಪ್ರಕಾಶ ಇಚಲಕರಂಜಿ, ಸುಮಿತ್ ಕಾವಳೆ,ಸುನೀಲ,ಐಹೊಳೆ,ಲಕ್ಷ್ಮಿ,ಈರಣ್ಣ ಮತ್ತಿತರರು,ಮತ್ತು ಗ್ರಂಥಾಲಯದ ಓದುಗರು ಉಪಸ್ಥಿತರಿದ್ದು,ಮಹಾತ್ಮರಿಗೆ ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಜೀವನ ಮತ್ತು ಸಾಧನೆ ಕುರಿತು ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.