ಜಾರಕಿಹೊಳಿಗೆ ಜೀವ ಬೆದರಿಕೆ ಪತ್ರ ಹಾಕುವ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜೀವ ಬೆದರಿಕೆ ಪತ್ರ ಹಾಕುವ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾಣಿಯ ಹಾಗೂ ಭೀಮರಕ್ಷಕ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಹಾಗೂ ಗೃಹ ಮಂತ್ರಿಗೆ ಮನವಿ ಸಲ್ಲಿಸಲಾಯಿತು..
ಇದಕ್ಕೂ ಮೊದಲು ಡಾ.ಬಿ. ಆರ್. ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ನಡೆಸಲಾಯಿತು. ಸಚಿವ ಸತೀಶ ಜಾರಕಿಹೊಳಿ ಅವರಿಗೆ ವಾರದ ಹಿಂದೆ ಜೀವ ಬೆದರಿಕೆ ಪತ್ರ ಬಂದಿದೆ. ಸರ್ಕಾರ ಈ ಬಗ್ಗೆ ಶೀಘ್ರದಲ್ಲಿ ತನಿಖೆಯನ್ನು ನಡೆಸಿ ತಪ್ಪಿತಸ್ತ ದುಷ್ಕರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು..
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾಣಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಸವರಾಜ್ ದೊಡ್ಮನಿ ಮಾತನಾಡಿ, ಈ ದೇಶದಲ್ಲಿ ಪ್ರಗತಿಪರ ವಿಚಾರವಾದಿಗಳು ತಮ್ಮ ಮನದಾಳದ ಮಾತನ್ನು ಬಿಚ್ಚಿ ಹೇಳಲು ಅವಿಭಕ್ತ ಸ್ವಾತಂತ್ರ್ಯ ಇಲ್ಲದೆ ಇರುವುದು ಈ ದೇಶದ ಒಂದು ದುರಂತವಾಗಿದೆ. ಶೀಘ್ರವೇ ಜೀವ ಬೆದರಿಕೆ ಪತ್ರ ಬರೆಯುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು..
ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾಣಿಯ ಮಹಿಳಾ ರಾಜ್ಯಾಧ್ಯಕ್ಷರಾದ ಮಂಜುಳಾ ರಾಮಗಾನಟ್ಟಿ ಮಾತನಾಡಿ, ಸತೀಶ್ ಅಣ್ಣ ಜಾರಕಿಹೊಳಿಯವರು ಮೌಡ್ಯದ ವಿರುದ್ಧ ಹೋರಾಡುತ್ತಿರುವ ಬುದ್ಧ ಬಸವ ಅಂಬೇಡ್ಕರ್ ವಿಚಾರಧಾರೆಗಳನ್ನು ಪಸಲಿಸುತ್ತಿರುವ ಸಚಿವರಿಗೆ ಭದ್ರತೆ ಹಾಗೂ ರಕ್ಷಣೆ ಕೊಡಬೇಕು..
ಬೆಳಗಾವಿ ಜಿಲ್ಲೆಯ ನಮ್ಮ ಸತೀಶ ಅಣ್ಣ ಜಾರಕಿಹೊಳಿ ಅವರು ಮೌಡ್ಯದ ವಿರುದ್ಧ ವೈಚಾರಿಕ ಚಿಂತನೆಯನ್ನು ನಾಡಿನ ತುಂಬಾ ಪಸರಿಸುತ್ತಿರುವ ಕೆಳ ವರ್ಗದ ಸಮಾಜವನ್ನು ಜಾಗೃತಗೊಳಿಸಿ ಬಸವಣ್ಣನವರ ವಚನ ಸಾಹಿತ್ಯವನ್ನು ಬುದ್ಧನ ಸರಳತೆಯನ್ನು ಅಂಬೇಡ್ಕರ್ ಅವರ ಕಾನೂನಿನ ತತ್ವವನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ತನು ಮನ ದನದಿಂದ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ರಾಜಕಾರಣಿಗಳ ಸಾಲಿನಲ್ಲಿ ಕರ್ನಾಟಕದ ಏಕೈಕ ನಾಯಕ ಬೆಳಗಾವಿ ಜಿಲ್ಲೆಯ ಎಲ್ಲಾ ಅಹಿಂದಾ ಹೋರಾಟಗಾರರು ಸತೀಶ್ ಅಣ್ಣ ಜಾತಿ ಹೊಳಿಯವರ ಜೊತೆ ನಿಲ್ಲುತ್ತೇವೆ ಎಂದರು..
ಭೀಮರಕ್ಷಕ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಈಶ್ವರ ಗುಡಜ ಮಾತನಾಡಿ. ಸಮಾಜ ಸುಧಾರಕರ ಮೇಲಿಂದ ಮೇಲೆ ಇಂತಹ ಬೆದರಿಕೆ ಪತ್ರಗಳು ಬರುತ್ತಿದ್ದು ಇವುಗಳಿಗೆ ನಾವುಗಳು ಆತಂಕ ಪಡಬೇಕಾಗಿಲ್ಲ ಅಚಿಂತ ಕರಾನು ನಾಶ ಮಾಡಲು ಹೊರಟ ಸಾಂಪ್ರದಾಯಗಳ ವಿರುದ್ಧ ಇಂತಹ ಅನೇಕ ಚಿಂತಕರು ಸಮಾಜ ಸುಧಾರಕರು ಹುಟ್ಟಿಕೊಳ್ಳುತ್ತಾರೆ ಎಂದರು ಜೀವ ಬೆದರಿಕೆ ಹಾಕುವ ಸಂಸ್ಕೃತಿಯ ಎಂದರು ಮತ್ತೆ ಭೀಮ ಕೋರೆಗಾವ್ ನಡೆಸಲಾಗುವುದು ಎಂದು ಎಚ್ಚರಿಸಿದರು ಮತ್ತೆ ಭೀಮ ಕೋರೆಗಾವ್ ನಡೆಸಲಾಗುವುದು ಎಂದು ಎಚ್ಚರಿಸಿದರು ಶ್ರೀ ಸನ್ಮಾನ್ಯ ಸತೀಶ್ ಅಣ್ಣ ಜಾರಕಿಹೊಳಿಯವರ ಜೊತೆಯಲ್ಲಿ ನಾವೆಲ್ಲರೂ ನಿಲ್ಲುತ್ತೇವೆ ಎಂದು ಹೇಳಿದರು..
ಪ್ರತಿಭಟನೆಯಲ್ಲಿ ಮುಖಂಡರು ಕರಿಯಪ್ಪ ಗುಡನ್ನವರ್, ಉದಯ್ ರೆಡ್ಡಿ, ದುರ್ಗಪ್ಪ ಗಾಡಿ, ಕಮಲ ಕರೆಂ ನವರ, ಸುನಿತಾ ಗಿರಿಹೋಳ ಭೋಪಾಲ್ ಹಿರೇಮನಿ, ಅರ್ಜುನ್ ಗಂಡಗೋಳ, ಪರಶುರಾಮ ರಾಮಗಾನಟ್ಟಿ, ಬಸ್ಸು ತಳವಾರ ಅರುಣ ಮಾದರ ಭಾರತಿ ಇಂಗಳಗಿ ಮಾದೇವಿ ಮಾದರ. ವಿಷ್ಣು ಬೆಂಡವಾಡ ಯುವರಾಜ್, ತಳವಾರ ಶೋಭಾ ತಳವಾರ ಉಮೇಶ ರಾಯಬಾಗ ಅಭಿಷೇಕ ರಾಯಭಾಗ ಆಕಾಶ ಬೇವಿನಕಟ್ಟಿ ದಲಿತ ಸಂಘಟನೆ ಕನ್ನಡಪರ ಸಂಘಟನೆ ರೈತ ಸಂಘಟನೆ ಸರ್ವ ಧರ್ಮ ಸಂಘಟನೆಯ ಮುಖಂಡರು ಭಾಗವಹಿಸಿದ್ದರು..