Belagavi News In Kannada | News Belgaum

ಸಿಎಂ ಸಿದ್ದುಗೆ ಹಲವು ಬೇಡಿಕೆಗಳ ಮನವಿ ಸಲ್ಲಿಸಿದ ಹೆಚ್.ಎಂ. ರೇವಣ್ಣ

ಬೆಳಗಾವಿ: ನಗರದ ನೆಹರೂ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ 9ನೇ ರಾಷ್ಟ್ರೀಯ ಸಮಾವೇಷದಲ್ಲಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಅವರು ಸಮಾವೇಶದಲ್ಲಿ ಏಳು ಪ್ರಮುಖ ವಿಷಯಗಳನ್ನು ಮಂಡಿಸಿದರು. ಕುರುಬರ ಬೃಹತ್ ಸಮಾವೇಶದಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

* ಜಾತಿವಾರು ಜನಗಣತಿ ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು.

* ರಾಷ್ಟ್ರ ಮಟ್ಟದಲ್ಲಿ ಕುರುಬರ ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಬೇಕು.

* ರಾಷ್ಟ್ರದಲ್ಲಿ ಇರುವ ಎಲ್ಲಾ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು.

* ಮೀಸಲಾತಿಯಲ್ಲಿ ಹಿಂದುಳಿದ ಮಹಿಳೆಯರಿಗೆ ಒಳ ಮೀಸಲಾತಿ ‌ನೀಡಬೇಕು.

* ನಂದಗಡ ಗ್ರಾಮವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಬೇಕು.

* ಕುರಿ ಮೇಯಿಸಲು ಕಂದಾಯ ಭೂಮಿ ಕಾಯ್ದಿರಿಸಬೇಕು, ಸಂಚಾರಿ ಆಸ್ಪತ್ರೆ, ಸಂಚಾರಿ ಶಾಲೆ ಆರಂಭಿಸಬೇಕು, ಹಾನಿಗೊಳಗಾದ ಕುರಿಗೆ ಪರಿಹಾರ ನೀಡಬೇಕು

*ಕುರಿ, ಮೇಕೆ ಮಹಾಮಂಡಳಕ್ಕೆ 100 ಕೋಟಿ ರೂಪಾಯಿ ಕೊಡಬೇಕು