Belagavi News In Kannada | News Belgaum

24ನೇ ವಸಂತಕ್ಕೆ ಕಾಲಿಟ್ಟ ಯುವ ನಾಯಕ್‌ ರಾಹುಲ್‌ ಜಾರಕಿಹೊಳಿಗೆ ಶುಭಾಶಯಗಳ ಮಹಾಪೂರ..

ಬೆಳಗಾವಿ: ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರ, ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಅವರ 24ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರಿಗೆ ಸಹಸ್ರ ಸಂಖ್ಯೆಯಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.
ಹೌದು….ಯುವ ನಾಯಕ್‌  ರಾಹುಲ್ ಜಾರಕಿಹೊಳಿ ಅವರು 23 ವರ್ಷ ಕಳೆದು 24ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅವರಿಗೆ ಶುಭಕೋರುವ ಸಂದೇಶಗಳು ರವಾನೆಯಾಗುತ್ತಿವೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅವರ ಅಭಿಮಾನಿಗಳು ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಬ್ಯಾನರ್ ಅಳವಡಿಸಿ ಮೆಚ್ಚಿನ ಯುವ ನಾಯಕನಿಗೆ ಶುಭ ಕೋರುತ್ತಿದ್ದಾರೆ..

ಯುವ ನಾಯಕ  ರಾಹುಲ್ ಜಾರಕಿಹೊಳಿ ಅವರ ಹುಟ್ಟುಹಬ್ಬವನ್ನು ಸೋಮವಾರ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.  ನಾಳೆ (ಅ. 4ರಂದು) ಗೋಕಾಕ್ ಹಿಲ್ ಗಾರ್ಡನ್ ನಲ್ಲಿ ಹುಟ್ಟುಹಬ್ಬ ಕಾರ್ಯಕ್ರಮಗಳು ವೈಭವದಿಂದ ನಡೆಯಲಿವೆ. ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ..

 


ಸರಳ-ಸಜ್ಜನಿಕೆ ಹೊಂದಿರುವ ತಂದೆಗೆ ತಕ್ಕ ಮಗ: ಸಚಿವ ಸತೀಶ ಜಾರಕಿಹೊಳಿ ಅವರಂತೆ ರಾಹುಲ್ ಜಾರಕಿಹೊಳಿಯವರು ಅತ್ಯಂತ ಆದರ್ಶಮಯ-ಪರಿಪೂರ್ಣವಾದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ತಮ್ಮ ತಂದೆಯವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನೆಡೆಯುತ್ತಿದ್ದು, ಬಡವರು, ಜನ ಸಾಮಾನ್ಯರ ಜತೆ ಸಾಮಾನ್ಯರಂತೆ ಬೆರೆಯುವ ಅಪರೂಪದ ಗುಣವನ್ನು ರಾಹುಲ್ ಜಾರಕಿಹೊಳಿಯವರು ಮೈಗೂಡಿಸಿಕೊಂಡಿದ್ದಾರೆ. ಜನತೆಯ ಕಷ್ಟಕ್ಕೆ ಸದಾ ಮಿಡಿಯುವ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಯುವಜನರಿಗೆ ಉತ್ಸಾಹಿ, ಸ್ಫೂರ್ತಿದಾಯಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ..

 


ಜನರ ಮನದಲ್ಲಿ ಮಿಂಚುತ್ತಿರುವ ನಾಯಕ: ಸಂಕಷ್ಟಕ್ಕೆ ಸ್ಪಂದಿಸುವಂತ ಸಹೃದಯಿ, ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸಿಕೊಟ್ಟು ಸರ್ವರಿಗೂ ಚಿರಪರಿಚಿತವಾದ ಯುವಕ ಕಣ್ಮಣಿಯೇ ರಾಹುಲ್ ಸತೀಶ ಜಾರಕಿಹೊಳಿ. ಲೋಕೋಪಯೋಗಿ ಸಚಿವ, ಯಮಕನಮರಡಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೊಳಿ ಅವರ ಸುಪುತ್ರರಾದ ರಾಹುಲ್ ಅವರು ರಾಜಕೀಯ ಪ್ರತಿಷ್ಠಿತ ಕುಟುಂಬದಿಂದ ಬಂದರೂ ಸಾಮಾಜಿಕ ಸೇವೆಯಿಂದಲೇ ಜಿಲ್ಲೆಯಲ್ಲಿ ಜನರ ಮನದಲ್ಲಿ ಯುವರಾಜನಾಗಿ ಮಿಂಚುತ್ತಿದ್ದಾರೆ..

 


ನೊಂದ ಜೀವಗಳಿಗೆ ಭರವಸೆ ಹೊಂಬೆಳಕಾದ ನಾಯಕ: ಬೆಳಗಾವಿ ಸೇರಿದಂತೆ ರಾಜ್ಯದಲ್ಲಿಯೇ ಸತೀಶ ಜಾರಕಿಹೊಳಿ ಅವರು ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದು, ಸಮಾಜ ಸೇವೆ ಮೂಲಕ ದೀನ ದಲಿತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ನೊಂದ ಜೀವಗಳಿಗೆ ಭರವಸೆ ಹೊಂಬೆಳಕಾಗಿದ್ದಾರೆ. 90ರ ದಶಕದಲ್ಲಿ ತಂದೆ ಸತೀಶ ಜಾರಕಿಹೊಳಿ ಅವರು ಸಮಾಜ ಸೇವೆಗೆ ಬಂದಿದ್ದು, ಶೋಷಿತರ ಪರ ದನಿಯಾಗಿದ್ದರು. ಸಾಮಾಜಿಕ ತಳಹದಿ ತತ್ವದಡಿ ಅಧಿಕಾರ ವೀಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಈ ಮೂಲಕ ಎಲ್ಲ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೆಲ್ಲರನ್ನೂ ಒಂದೇ ವೇದಿಕೆಗೆ ಕರೆದುಕೊಂಡು ಹೋಗುವುದು ಇತಿಹಾಸ. ಪ್ರತಿ ಜಿಲ್ಲೆಯಲ್ಲಿಯೂ ಸತೀಶ ಅಭಿಮಾನ ಬಳಗವು ಸತೀಶ ಸೂಚಿಸಿದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಈಗ ಸತೀಶ ಅವರ ಪುತ್ರ ರಾಹುಲ್ ಕೂಡ ತಂದೆಯಂತೆ ಬಡವರ ಕಷ್ಟಗಳಿಗೆ ಸ್ಪಂದಿಸುತ್ತ ಸಮಾಜಮುಖಿ ಕಾರ್ಯಗಳಿಗೆ ಮುಂಚೂಣಿಯಾಗಿ ನಿಂತಿರುವುದು ಸತೀಶ ಅವರಿಗೆ ಆನೆಬಲ ಬಂದಿದೆ. ಹಾಗೆಯೇ ಜಾರಕಿಹೊಳಿ ಕುಟುಂಬದ ಮೇಲಿನ ಗೌರವ ಇಮ್ಮಡಿಗೊಳಿಸುವಂತೆ ಮಾಡಿದೆ.


ಹಸಿದ ಹೊಟ್ಟೆಗಳ ತುಂಬಿಸಿದ ಅನ್ನದಾತ: ಪ್ರವಾಹ ಸಂಕಷ್ಟಕ್ಕೆ ಸತೀಶ ಜಾರಕಿಹೊಳಿ ಕಾಲಿಗೆ ಚಕ್ರಕಟ್ಟಿಕೊಂಡು ಜಿಲ್ಯಾದ್ಯಂತ ತಿರುಗಿ ಸಂತ್ರಸ್ತರಿಗೆ ಸಹಾಯ ಹಸ್ತ ಹಾಗೂ ಅಗತ್ಯ ಮೂಲ ಸೌಕರ‌್ಯಗಳಿಗೆ ವ್ಯವಸ್ಥೆ ಮಾಡಿಸಿದ್ದರು. ತಂದೆಯ ಆಸೆಯಂತೆ ರಾಹುಲ್ ಕೂಡ ಜನರ ಕಷ್ಟಗಳಿಗೆ ಸ್ಪಂದಿಸಿ ಸಹಾಯ ಹಸ್ತ ನೀಡಿ ಬದುಕುವ ಭರವಸೆ ಹೆಚ್ಚಿಸಿದ್ದರು..

ಹಾಗೆಯೇ ಕೋವಿಡ್ ಅಲೆಗೆ ಕೂಲಿ ಕಾರ್ಮಿಕರು ಸೇರಿದಂತೆ ದುಡಿದು ತಿನ್ನುವ ವರ್ಗದ ಜನರಿಗೆ ಮಾನಸಿಕಸ್ಥೈರ್ಯ ತುಂಬುವುದರೊಂದಿಗೆ ಆತ್ಮಬಲ ಹೆಚ್ಚಿಸಿರುವುದು ಎಲ್ಲರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಅತಿವೃಷ್ಟಿಯಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ವೈಯಕ್ತಿಕವಾಗಿ ನೆರವಿನ ಹಸ್ತ ಚಾಚಿದ್ದಲ್ಲದೇ ಹಸಿದ ಹೊಟ್ಟೆಗಳಿಗೆ ಅನ್ನ, ಆಸರೆ ನೀಡಿ ಅನ್ನದಾತರೆಂದಿನಿಸಿದ್ದಾರೆ..

 

ಒಟ್ಟಾರೆ ಗಮನಿಸುವುದಾದರೆ ರಾಹುಲ್ ಜಾರಕಿಹೊಳಿ ಅವರು ತಮ್ಮ ತಂದೆ ಸತೀಶ ಜಾರಕಿಹೊಳಿ ಅವರ ನೆರಳಿನಂತೆ ಸಾಗುತ್ತಿದ್ದು ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲೇ ಸೇವಾ ಮನೋಭಾವ ಅಳವಡಿಸಿಕೊಂಡು ಮುನ್ನುಗುತ್ತಿರುವ ಯುವ ನಾಯಕ  ರಾಹುಲ್ ಜಾರಕಿಹೊಳಿ ಅವರ ಭವಿಷ್ಯ ಉಜ್ವಲವಾಗಿ ಸಾಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ..