Belagavi News In Kannada | News Belgaum

24ನೇ ಜನ್ಮದಿನ- ಸರ್ವ ಶ್ರೀಗಳಿಂದ ಆರ್ಶೀವಾದ ಪಡೆದ ರಾಹುಲ್ ಜಾರಕಿಹೊಳಿ

ಯುವ ನಾಯಕ ರಾಹುಲ್ ಜಾರಕಿಹೊಳಿ ಯುವಕರ ಕಣ್ಮಣಿ: ಶಿವಾನಂದ ಸ್ವಾಮೀಜಿ

ಗೋಕಾಕ: ಆಧುನಿಕ ಜಗತ್ತಿನಲ್ಲಿ ಶ್ರೀಮಂತಿಕೆ ಇದ್ದರೂ ಸರಳ, ಸಜ್ಜನಿಕೆಯಿಂದ ಬದುಕುತ್ತಿರುವ ಯುವ ನಾಯಕ, ಸತೀಶ್ ಶುಗರ್ಸ್ ನಿರ್ದೇಶಕ ರಾಹುಲ್ ಜಾರಕಿಹೊಳಿಯವರು ಯುವಕರ ಕಣ್ಮಣಿ ಎಂದು ಸುಣದೊಳ್ಳಿಯ ಪವಾಡ ಪುರುಷ ಶ್ರೀ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ರಾಹುಲ್ ಜಾರಕಿಹೊಳಿಯವರ 24ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಸೇವೆ ಸಲ್ಲಿಸುವ ಮೂಲಕ ದೀನ, ದಲಿತರ ಜತೆಗೆ ಧ್ವನಿ ಇಲ್ಲದವರ ಧ್ವನಿ ಆಗುತ್ತಿರುವ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಎಲ್ಲಾ ಯುವಕರಿಗೆ ಪ್ರೀತಿ ಪಾತ್ರರಾಗಿದ್ದಾರೆಂದು ಬಣ್ಣಿಸಿದರು.

ತಂದೆ ಸತೀಶ್ ಜಾರಕಿಹೊಳಿ ಅವರ ದಾರಿಯಲ್ಲಿ ಸಾಗುತ್ತಿರುವ ರಾಹುಲ್ ಅವರು ಪ್ರತಿಯೊಬ್ಬರೂ ಕರೆದರೂ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕೈಲಾದಷ್ಟು ಸಹಾಯ ಮಾಡಿ ಯವಕರಿಗೆ ಸಹಕಾರ ನೀಡುತ್ತಿದ್ದು, ರಾಜಕೀಯವಾಗಿಯೂ ಮುಂದೊಂದು ದಿನ ರಾಜ್ಯ ನಾಯಕನಾಗಿ ಬೆಳೆಯಲಿ ಎಂದು ಹರಿಸಿದರು.

ಬಸವರಾಜ ದೇವರು ಮಾತನಾಡಿ, ರಾಜಕೀಯ, ಸಾಂಸ್ಕೃತಿಕವಾಗಿ ಸಚಿವ ಸತೀಶ್ ಜಾರಕಿಹೊಳಿಯವರ ಕೊಡುಗೆ ಈ ಭಾಗಕ್ಕೆ ಸಾಕಷ್ಟಿದೆ. ಅವರ ಪ್ರಯತ್ನದ ಫಲವಾಗಿಯೇ ಗೋಕಾಕ ನಾಡು ಸಾಂಸ್ಕೃತಿಕವಾಗಿ ಶ್ರೀಮಂತಗೊಂಡಿದೆ. ತಂದೆಗೆ ತಕ್ಕ ಮಗನಾಗಿ ರಾಹುಲ್ ಜಾರಕಿಹೊಳಿಯವರು ಸಮಾಜದಲ್ಲಿ ಸಾಗುತ್ತಿದ್ದು, ದೇವರು ಅವರಿಗೆ ಒಳ್ಳೆಯ ಆರೋಗ್ಯ, ಆಯುಷ್ಯ ನೀಡಲೆಂದು ಆಶೀರ್ವದಿಸಿದರು.

ಅರಭಾವಿಯ ದುರದುಂಡೇಶ್ವರ ಮಠದ ಪರಮ ಪೂಜ್ಯ ಸಿದ್ದಲಿಂಗಯ್ಯ ಸ್ವಾಮೀಜಿ, ಭಾಗೋಜಿಕೊಪ್ಪದ ಮುರಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಜನ್ಮದಿನದ ಅಂಗವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಸರ್ವ ಶ್ರೀಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿಯವರು ಸತ್ಕರಿಸಿ, ಆಶೀರ್ವಾದ ಪಡೆದರು.

ಸಾವಿರಾರು ಯುವಕರು, ಮುಖಂಡರು ರಾಹುಲ್ ಜಾರಕಿಹೊಳಿ ಅವರಿಗೆ ಪುಷ್ಪ ಗುಚ್ಛ ನೀಡಿ ಜನ್ಮದಿನದ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಘಟಪ್ರಭಾ ಸಕ್ಕರೆ ಕಾರ್ಖಾನೆ ಚೇರ್ಮನ್ ಅಶೋಕ ಪಾಟೀಲ್, ಮಾಜಿ ನಗರ ಅಧ್ಯಕ್ಷ ಕುಬೇಂದ್ರ ಕಲಾಲ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಕಬ್ಬುರ, ಕೆ.ಟಿ. ಗಾಣಿಗೇರ, ವಿವೇಕ ಜತ್ತಿ, ಶಿವನಗೌಡ ಪಾಟೀಲ್, ಪಾಂಡು ಮನ್ನಿಕೇರಿ, ಅರ್ಜುನ್ ನಾಯಕವಾಡಿ, ಅರವಿಂದ ಕಾರ್ಚಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.