ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಸಂಘಟನೆಯ ಮಹಿಳಾ ಘಟಕ ಜಿಲ್ಲಾಧ್ಯಕ್ಷರನ್ನಾಗಿ ಗಿರಿಜಾ ಪಂಕಜ್ ಕೋಲುರ್ ನೇಮಕ

ಬೆಳಗಾವಿ: ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಸಂಘಟನೆಯ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರುವ ಶ್ರೀಮತಿ ಗಿರಿಜಾ ಪಂಕಜ್ ಕೋಲಾರ್ ಇವರನ್ನು ಮಹಿಳಾ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ರಕ್ಷಣಾ ವೇದಿಕೆ ಯುವ ಸೇನೆ ಸಂಘಟನೆಯ ಬೆಳಗಾವಿಯ ಜಿಲ್ಲಾಧ್ಯಕ್ಷರಾದ ಬಾಳಪ್ಪಾ ಬ ಗುಡಗೇನಟ್ಟಿ ಅವರು ಆದೇಶ ನೀಡಿರುತ್ತಾರೆ.
ಆದ್ದರಿಂದ ಶ್ರೀಯುತರು ಇಂದಿನಿಂದಾ ಸಂಘಟನೆಯನ್ನು ಗ್ರಾಮೀಣಾ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಯನ್ನು ಬಲಿಷ್ಠ ಗೊಳಿಸಬೇಕು ಎಂದು ತಿಳಿಸುತ್ತಾ ಆದೇಶ ಪತ್ರವನ್ನು ಗೌರವ ಪೂರಕ ದಿನಾಂಕ ೪.೧೦.೨೦೨೩ರಂದು ಗಿರಿಜಾ ಪಂಕಜ್ ಕೋಲಾರ್ ಅವರಿಗೆ ಮಹಿಳಾ ಘಟಕದ ಬೆಳಗಾವಿಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಹಾಗೂ ಈ ಹಿಂದಿನ ಮಹಿಳಾ ಜಿಲ್ಲಾ ಅಧ್ಯಕ್ಷರಾಗಿದ್ದ ಸಂಗಿತಾ ಕಾಂಬಳೆರವರನ್ನು ಸಂಘಟನೆಯಿಂದಾ ಕೈಬಿಟ್ಟು, ಈ ಸಂಘಟನೆಯಲ್ಲಿ ಯಾವುದೇ ಹುದ್ದೆ ಅವರಿಗೆ ಇರುವುದಿಲ್ಲಾ. ಇನ್ನು ಮುಂದೆ ಗಿರಿಜಾ ಪಂಕಜ್ ಕೋಲಾರ್‌ರನ್ನು ಸಂಪರ್ಕಿಸಬೇಕೆಂದು.
ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಸಂಘಟನೆಯ ಬೆಳಗಾವಿಯ ಜಿಲ್ಲಾಧ್ಯಕ್ಷರಾದ ಬಾಳಪ್ಪಾ ಗುಡಗೇನಟ್ಟಿ ರವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.