ಟಾಟಾ ಏಸ್-ಬೈಕ್ ಅಪಘಾತ; ಸ್ಥಳದಲ್ಲೇ ದಂಪತಿ ಸಾವು

ಅಥಣಿ: ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ದಂಪತಿ ದಾರುಣವಾಗಿ ಸಾವಿಗೀಡಾದ ಘಟನೆ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ನಡೆದಿದೆ..
ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಗನಾಪೂರ ಗ್ರಾಮದ ಅನಿಲ ಅಣ್ಣಾ ಸಾಬ ಪಾಟೀಲ್ (45) ಅನಿತಾ ಅನಿಲ ಪಾಟೀಲ್ (40) ಮೃತ ದುರ್ದೈವಿಗಳು, ಸಿಂಗನಾಪುರ ಗ್ರಾಮದಿಂದ ಅಥಣಿ ಪಟ್ಟಣಕ್ಕೆ ಬರುವಾಗ ರಸ್ತೆ ಮಧ್ಯದಲ್ಲಿ ಈ ಅಪಘಾತ ಸಂಭವಿಸಿದೆ..
ಅಪಘಾತವಾದ ಬೈಕ್ ಗೆ ಮತ್ತೊಂದು ಬೈಕ್ ಡಿಕ್ಕಿಯಾದ ಪರಿಣಾಮ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಅಥಣಿ ಪಿಎಸ್‌ಐ ಶಿವಾನಂದ ಕಾರಜೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಗಾಯಾಳುಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ..