Belagavi News In Kannada | News Belgaum

ಇಸ್ರೇಲ್ ದಾಳಿಯಲ್ಲಿ ಹಮಾಸ್ ವಿತ್ತಸಚಿವ ಮೃತ್ಯು

ಗಾಝಾ: ಸೋಮವಾರ ತಡರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಹೇಳಿದೆ.

ಗಾಝಾ ಪಟ್ಟಿಯ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್ನ ರಾಜಕೀಯ ಘಟಕದ ವಿತ್ತಸಚಿವ ಜವಾದ್ ಅಬು ಶಮಾಲ ಹಾಗೂ ಹಮಾಸ್ ನ ಆಂತರಿಕ ವ್ಯವಹಾರ ವಿಭಾಗದ ಮುಖ್ಯಸ್ಥ ಝಕಾರಿಯಾ ಅಬು ಮೋಮ್ಮರ್ ಹತರಾಗಿದ್ದಾರೆ ಎಂದು ಐಡಿಎಫ್ ಹೇಳಿದೆ.

ಜವಾದ್ ಹಮಾಸ್ ನ ಹಣಕಾಸು ವಿಭಾಗವನ್ನು ನಿರ್ವಹಿಸುತ್ತಿದ್ದರು ಹಾಗೂ ಗಾಝಾ ಪಟ್ಟಿಯ ಒಳಗೆ ಮತ್ತು ಹೊರಗೆ ಭಯೋತ್ಪಾದನೆಗೆ ಆರ್ಥಿಕ ನಿಧಿಯನ್ನು ನಿಗದಿಪಡಿಸುತ್ತಿದ್ದರು. ಝಕಾರಿಯಾ ಹಮಾಸ್ ನ ಗಾಝಾ ಮುಖ್ಯಸ್ಥ ಯಾಹ್ಯಾ ಸಿನ್ವರ್ನ ಅತ್ಯಂತ ನಂಬಿಕಸ್ತ ಸಹವರ್ತಿಯಾಗಿದ್ದ ಮತ್ತು ಹಮಾಸ್ ನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಮತ್ತು ಗಾಝಾ ಪಟ್ಟಿಯಲ್ಲಿ ಭಯೋತ್ಪಾದಕ ತಂಡಗಳ ನಡುವಿನ ಸಂಯೋಜಕರಾಗಿದ್ದರು ಎಂದು ಐಡಿಎಫ್ ಹೇಳಿದೆ./////