Belagavi News In Kannada | News Belgaum

ಭುವನೇಶ್ವರಿ ಉತ್ಸವಕ್ಕೆ ಅದ್ಧೂರಿ ಚಾಲನೆ

ಬೆಳಗಾವಿ; ಇಲ್ಲಿನ ಬೆಳಗಾವಿ ಶ್ರೀ ಭುವನೇಶ್ವರಿ ಉತ್ಸವ ಸಂಘ, ಜಿಲ್ಲಾ ಲೇಖಕಿಯರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭುವನೇಶ್ವರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಇಲ್ಲಿನ ಸುಭಾಷ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಚಲನಚಿತ್ರ ಮತ್ತು ಟಿ.ವಿ. ಕಲಾವಿದೆ ಮಾಲತಿ ಸರದೇಶಪಾಂಡೆ ಅವರು ಉದ್ಘಾಟಿಸಿದರು. ಸಂಸ್ಥಾಪಕ ಸದಶ್ಯೆ ಶಾಂತಕ್ಕ ಹೆಗಡೆ, ರಂಗನಾ ನಾಯಕ ಲೀಲಾ ಚೌಗುಲೆ, ಜಯಶೀಲಾ ಬ್ಯಾಕೂಡ್, ರೇಖಾ ಜೋಶಿ ಅತಿಥಿಗಳಾಗಿದ್ದರು. ನೈನಾ ಹಿರೇಗೌಡರ್ ಪ್ರಾರ್ಥಿಸಿದರು. ದೀಪಾ ಪದಕಿ, ವಿಜಯಲಕ್ಷ್ಮೀ ಹೊಸಮನಿ ಹಾಗೂ ಜಯಶ್ರೀ ಸ್ವಾಗತಗೀತೆ ಹಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಂಜನಾ ನಾಯಕ, ವರ್ಷದಿಂದ ವರ್ಷಕ್ಕೆ ಈ ಭುವನೇಶ್ವರಿ ಉತ್ಸವಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಮಹಿಳೆಯಿಂದ ಮಹಿಳೆಯರಿಗಾಗಿ ನಡೆಯುವ ಕಾರ್ಯಕ್ರಮ ಇದು. ನಾಡು ನುಡಿಗೆ ಸೇವೆ ಸಲ್ಲಿಸುತ್ತಿದೆ ಈ ಕಾರ್ಯಕ್ರಮ ಎಂದರು.

ಕಾರ್ಯಕ್ರಮ ಉದ್ಟಾಟನೆ ನೆರವೇರಿಸಿ ಮಾತನಾಡಿದ ಮಾಲತಿ ಸರದೇಶಪಾಂಡೆ, ಕನ್ನಡ ನೆಲ, ಜಲ, ಸಂಸ್ಕೃತಿಯನ್ನು ಬಿಂಬಿಸುವ ಉತ್ಸವ ಈ ಭುವನೇಶ್ವರಿ ದೇವಿ ಉತ್ಸವ ಎಂದರು. ಕನ್ನಡ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಅದೃಷ್ಟವಂತರು. ಈ ಉತ್ಸವದ ಮೂಲಕ ಮಹಿಳೆಯರ ಒಗ್ಗಟ್ಟಾಗಿದ್ದು ಸಂತಸದ ಸಂಗತಿ. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹೇಳಿದರು. ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಪ್ರೊತ್ಸಾಹಿಸಬೇಕು. ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಹೇಳಿ ಜಾನಪದ ಗೀತೆಯನ್ನು ಹಾಡಿ ಸಭಿಕರನ್ನು ರಂಜಿಸಿದರು.ಬೆಳಗಾವಿ; ಇಲ್ಲಿನ ಬೆಳಗಾವಿ ಶ್ರೀ ಭುವನೇಶ್ವರಿ ಉತ್ಸವ ಸಂಘ, ಜಿಲ್ಲಾ ಲೇಖಕಿಯರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭುವನೇಶ್ವರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಇಲ್ಲಿನ ಸುಭಾಷ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಚಲನಚಿತ್ರ ಮತ್ತು ಟಿ.ವಿ. ಕಲಾವಿದೆ ಮಾಲತಿ ಸರದೇಶಪಾಂಡೆ ಅವರು ಉದ್ಘಾಟಿಸಿದರು. ಸಂಸ್ಥಾಪಕ ಸದಶ್ಯೆ ಶಾಂತಕ್ಕ ಹೆಗಡೆ, ರಂಗನಾ ನಾಯಕ ಲೀಲಾ ಚೌಗುಲೆ, ಜಯಶೀಲಾ ಬ್ಯಾಕೂಡ್, ರೇಖಾ ಜೋಶಿ ಅತಿಥಿಗಳಾಗಿದ್ದರು. ನೈನಾ ಹಿರೇಗೌಡರ್ ಪ್ರಾರ್ಥಿಸಿದರು. ದೀಪಾ ಪದಕಿ, ವಿಜಯಲಕ್ಷ್ಮೀ ಹೊಸಮನಿ ಹಾಗೂ ಜಯಶ್ರೀ ಸ್ವಾಗತಗೀತೆ ಹಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಂಜನಾ ನಾಯಕ, ವರ್ಷದಿಂದ ವರ್ಷಕ್ಕೆ ಈ ಭುವನೇಶ್ವರಿ ಉತ್ಸವಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಮಹಿಳೆಯಿಂದ ಮಹಿಳೆಯರಿಗಾಗಿ ನಡೆಯುವ ಕಾರ್ಯಕ್ರಮ ಇದು. ನಾಡು ನುಡಿಗೆ ಸೇವೆ ಸಲ್ಲಿಸುತ್ತಿದೆ ಈ ಕಾರ್ಯಕ್ರಮ ಎಂದರು.

ಕಾರ್ಯಕ್ರಮ ಉದ್ಟಾಟನೆ ನೆರವೇರಿಸಿ ಮಾತನಾಡಿದ ಮಾಲತಿ ಸರದೇಶಪಾಂಡೆ, ಕನ್ನಡ ನೆಲ, ಜಲ, ಸಂಸ್ಕೃತಿಯನ್ನು ಬಿಂಬಿಸುವ ಉತ್ಸವ ಈ ಭುವನೇಶ್ವರಿ ದೇವಿ ಉತ್ಸವ ಎಂದರು. ಕನ್ನಡ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಅದೃಷ್ಟವಂತರು. ಈ ಉತ್ಸವದ ಮೂಲಕ ಮಹಿಳೆಯರ ಒಗ್ಗಟ್ಟಾಗಿದ್ದು ಸಂತಸದ ಸಂಗತಿ. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹೇಳಿದರು. ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಪ್ರೊತ್ಸಾಹಿಸಬೇಕು. ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಹೇಳಿ ಜಾನಪದ ಗೀತೆಯನ್ನು ಹಾಡಿ ಸಭಿಕರನ್ನು ರಂಜಿಸಿದರು./////