ಉಡ ಬೇಟೆಯಾಡಿದ ಮೂವರ ಬಂಧನ

ಸಕಲೇಶಪುರ: ತಾಲೂಕಿನ ಯಸಳೂರು ಹೋಬಳ್ಳಿಯ ಮಾಗೇರಿ ಗ್ರಾಮದಲ್ಲಿ ಅಳಿವಿನಂಚಿನ ಪ್ರಾಣಿ ಉಡವನ್ನು ಬೇಟೆಯಾಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಮಾಂಸ ಸಮೇತ ಯಸಳೂರು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ತಾಲೂಕಿನ ಮಾಗೇರಿ ಗ್ರಾಮದ ಬಾಲಸುಬ್ರಹ್ಮಣ್ಯ, ರಾಜೇಗೌಡ, ಕಡ್ಲಿಪೇಟೆ ನಾಗೇಶ್ ಕೆ ಎಂ ಮೂರು ಜನ ಆರೋಪಿಗಳು. ಈ ಮೂವರ ಮೇಲೆ ದೂರು ದಾಖಲಿಸಿ ಭೇಟೆಯಾಡಿದ ಪ್ರಾಣಿಯ ಮಾಂಸ ಸಮೇತ ಬಂಧಿಸಲಾಗಿದೆ.
ಉಡವನ್ನು ಬೇಟೆಯಾಡಿ ತಮ್ಮ ಮನೆಯಲ್ಲಿ ಮಾಂಸ ಬೇಯಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯ ಅಧಿಕಾರಿ ಜಿ .ಆರ್ .ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಒಂಟಿ ನಳಿಕೆ ಬಂದೂಕು, 1.75 ಕೆಜಿ ಉಡ ಮಾಂಸ ಹಾಗೂ ಬೇಟೆಗೆ ಉಪಯೋಗಿಸಿದ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ
ಒಳಪಡಿಸಲಾಗಿದೆ.
ಕಾರ್ಯಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಅಧಿಕಾರಿ ಮಹಾದೇವ, ಎಂ ಎಸ್ ಉಪ ವಲಯ ಅರಣ್ಯ ಅಧಿಕಾರಿ ವಿಜಯ್ ಕುಮಾರ್, ಸೋಮಶೇಖರ್, ಗಸ್ತು ಅರಣ್ಯ ಪಾಲಕರಾದ ನವೀನ್ ಕುಮಾರ್ ಎಸ್.ಆರ್, ದಯಾನಂದ್ ಸಿಬ್ಬಂದಿಗಳು ಹಾಜರಿದ್ದರು.//////