Belagavi News In Kannada | News Belgaum

ಕೊನೆಯ ದಿನ 23 10 2023 ರಂದು ನವರಾತ್ರಿ ದಾಂಡ್ಯಿಯಾ ಕಾರ್ಯಕ್ರಮದಲ್ಲಿ ಮಿಂಚಿದ ಮಹಿಳೆಯರು

ಬೆಳಗಾವಿ ಕೊನೆಯ ದಿನ 23 10 2023 ರಂದು ನವರಾತ್ರಿ ದಾಂಡ್ಯಿಯಾ ಕಾರ್ಯಕ್ರಮದಲ್ಲಿ ಮಿಂಚಿದ ಮಹಿಳೆಯರು.


ಹೌದು ಬೆಳಗಾವಿ ನಗರದಲ್ಲಿ ಶ್ರೀ ಸಾಯಿಬಾಬಾ ದೇವಸ್ಥಾನ ಅಭಿವೃದ್ಧಿ ಹಾಗೂ ಆಶ್ರಯ ಕಾಲೋನಿ ಸಾರಥಿ ನಗರ ರಹವಾಸಿಗಳ ಪಂಚ್ ಕಮಿಟಿ ಹಾಗೂ ಬದಲಾವಣೆಯ ಬೆಳಕು ಹಾಗೂ ಜಾನಪದ ಕಲಾ ಮತ್ತು ಕ್ರಿಡಾ ಸಂಘ ಆಯೋಜಿಸಿದ ಒಂಬತ್ತು ದಿನಗಳ ಈ ಕಾರ್ಯಕ್ರಮ ರಹವಾಸಿಗಳಿಗೆ 9 ದಿನಗಳ ಕಾಲ ಮನರಂಜನೆಯಾಗಿತ್ತು. ಪ್ರತಿವರ್ಷದಂತೆ ಈ ವರ್ಷವು ಎರಡು ಸಂಘಗಳು ಸಹಯೋಗದಲ್ಲಿ ದಾಂಡಿಯಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ನಗರದ ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕೊನೆಯ ದಿನ ಒಂಬತ್ತು ದಿನಗಳ ಭಾಗವಹಿಸಿದ ಮಹಿಳೆಯರಿಗೆ ಬದಲಾವಣೆಯ ಬೆಳಕು ಹಾಗೂ ಜಾನಪದ ಕಲಾ ಮತ್ತು ಕ್ರಿಡಾ ಸಂಘದ ವತಿಯಿಂದ ಸ್ಪರ್ಧಾಳಿಗಳಿಗೆ ಕೊನೆಯ ದಿನ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ಅಭಿನಂದನಾ ಪತ್ರವನ್ನು ಬದಲಾವಣೆಯ ಬೆಳಕು ಸಂಘದ ಅಧ್ಯಕ್ಷರು ಜನಾಬಾಯಿ ಸತೀಶ  ಗುಡಗೇನಟ್ಟಿ ಹಾಗೂ ನಗರದ ಹಿರಿಯರಿಂದ ಅಭಿನಂದನಾ ಪತ್ರ ನೀಡಲಾಯಿತು
ಈ ಕಾರ್ಯಕ್ರಮದಲ್ಲಿ ಬಸವರಾಜ್ ಕಲಾದಗಿ ಮಹದೇವ ರಾಗಿ ಹಾಗೂ ಶ್ರೀ ಸಾಯಿಬಾಬಾ ದೇವಸ್ಥಾನ ಅಭಿವೃದ್ಧಿ ಮತ್ತು ರಹವಾಸಿಗಳ ಪಂಚ್ ಕಮಿಟಿ ಅಧ್ಯಕ್ಷರಾದ ಸತೀಶ್ ಗುಡಗೇನಟ್ಟಿ ಮತ್ತು ಮುನ್ನಾ ಬೆಟಗೇರಿ ಮಲ್ಲವ್ವಾ ಗಿರಫೊಗಳ್ ಮತ್ತು ನಗರದ ಹಿರಿಯರು ಉಪಸ್ಥಿತರಿದ್ದರು