Belagavi News In Kannada | News Belgaum

ವಿಮಾನದ ವಾಶ್​​ರೂಮ್​​ನಲ್ಲಿ ಒಂದು ಕೆಜಿ ಚಿನ್ನ ಪತ್ತೆ

ಬೆಂಗಳೂರು: ವಿಮಾನದ ವಾಶ್ ರೂಮ್​​ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಒಂದು ಕೆಜಿ ಅಧಿಕ ತೂಕದ 80 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅ. 24ರಂದು ಅಬುಧಾಬಿಯಿಂದ ಬಂದ ಇವೈ 238 ವಿಮಾನವನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಿಮಾನದ ವಾಶ್ ರೂಮ್​ನಲ್ಲಿ ಕಪ್ಪು ಬಣ್ಣದ ಚೀಲದಲ್ಲಿ ಚಿನ್ನವನ್ನು ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ. ಒಟ್ಟು 1331.66 ಗ್ರಾಂ ತೂಕದ 80,21,920 ರೂಪಾಯಿ ಮೌಲ್ಯದ ಚಿನ್ನವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.//////