ನಟ ಜಗ್ಗೇಶ್‌ಗೂ ಸಂಕಷ್ಟ ತಂದ ಹುಲಿ ಉಗುರು

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಸದ್ಯ ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ನ್ಯಾಯಾಂಗ ಬಂಧನಲ್ಲಿ ಇದ್ದಾರೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಹಲವು ನಟರ ಮೇಲೆ ಕೂಡ ಆರೋಪ ಕೇಳಿ ಬರುತ್ತಿದ್ದು, ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸುತ್ತಿದ್ದಾರೆ.
ಈ ನಡುವೆ ಈಗ ರಾಜ್ಯ ಸಭಾ ಸದ್ಯಸ, ಸ್ಯಾಂಡಲ್‌ವುಡ್ ನಟ ಜಗ್ಗೇಶ್ ಅವರು ಈ ಹಿಂದೆ ಕನ್ನಡದ ಖಾಸಗಿ ವಾಹಿನಿಯೊಂದರ ಜೊತೆಗೆ ಮಾತನಾಡುತ್ತ ಯಾವು ಧರಿಸಿರುವುದು ನೈಜ ಹುಲಿ ಉಗುರು ಆಗಿದ್ದು, ಇದನ್ನು ನನಗೆ ನಮ್ಮ ಅಮ್ಮ ನನ್ನ ಇಪ್ಪತ್ತನೇ ಜನ್ಮ ದಿನದಕ್ಕೆ ನೀಡಿದ್ದರು ಅಂತ ಹೇಳಿದ್ದರು, ಸದ್ಯ ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ನಟ ಜಗ್ಗೇಶ್ ವಿರುದ್ದ ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸಿದ್ದಾರೆ.//////