Belagavi News In Kannada | News Belgaum

ವಿವಿಧೆಡೆ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ: ನಗರದ ಹಲವೆಡೆ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಬೆಳಗಾವಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

1] ಬಹ್ಮನ್ ಬಿನಿಯಾಜ್ ಸ/ಓ ಅಬ್ದೊಲ್ಹೊಸ್ಸೇನ್, (36) 2] ಹಬೀಬೆ ಮೊಘೋಲ್ ಡಿ/ಓ ಹಸನ್, (60) , 3] ಶೀದಾ ಕರಿಮಿಜದೇಹ್ ಡಿ/ಓ ಘೋಲಂ, (20 ), 4] ಕರೀಮ್ ದಾವಾಲೂ S/O ಅಹ್ಮದ್ ಬಂಧಿತ ಆರೋಪಿಗಳು.‌ ಕಳೆದ ಮೂರು ದಿನಗಳ‌ ಹಿಂದೆ ಬೆಳಗಾವಿ ನಗರದ ಶಗುಣ ಟ್ರೇಡರ್ಸ್ ಗೆ ನಾಲ್ವರು ಇರಾನಿ ಪ್ರಜೆಗಳು ಗ್ರಾಹಕರಾಗಿ ಬಂದಿದ್ದರು. ಕೆಲಸಗಾರರ ಗಮನವನ್ನು ಬೇರೆಡೆಗೆ ಸೆಳೆದು ಮೋಸ ಮಾಡಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಖಡೇಬಜಾರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನುಬಿದ್ದ ಬೆಳಗಾವಿ ನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಿಂದ ಒಟ್ಟು 14 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ಮೇಲೆ 380 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ/////