Belagavi News In Kannada | News Belgaum

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಚಿವರಾದ ಡಾ. ಎಂ.ಸಿ. ಸುಧಾಕರ, ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ: ಹಿರೇಬಾಗೇವಾಡಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡದ ಅಭಿವೃದ್ಧಿ ಕಾಮಗಾರಿಯನ್ನು  ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ ,  ಲಕ್ಷ್ಮಿ  ಹೆಬ್ಬಾಳಕರ್ ಅವರು ಪರಿಶೀಲನೆ ನಡೆಸಿದರು.

ಗಿರೀಶ ಎಂ. ಸ್ವಾಮಿ ಕನ್ಸಲ್ಟೆನ್ಸಿ ಅವರ ಅಧಿಕಾರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಯೋಜನೆಯ ವಿವರಗಳನ್ನು ಸಚಿವರುಗಳಿಗೆ ವಿವರಿಸಿದರು.

ಗುಣಮಟ್ಟದ ಕಾಮಗಾರಿಯೊಂದಿಗೆ,   ಮುಂದಿನ ಒಂದು ವರ್ಷದೊಳಗಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವರು ತಿಳಿಸಿದರು.   ಅಗತ್ಯ ಸಲಹೆ, ಸೂಚನೆ ಹಾಗೂ ನೆರವು-ಅನುದಾನವನ್ನು ಪರಿಶೀಲಿಸಿ ಬಿಡುಗಡೆ ಮಾಡುವುದಾಗಿ ಸಚಿವ ಡಾ.  ಸುಧಾಕರ ಭರವಸೆ ನೀಡಿದರು.

ಈ ಸಂದರ್ಭದಲ್ಲಿ   ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿಜಯ ಎಫ್. ನಾಗಣ್ಣವರ, ಕುಲಸಚಿವರಾದ ರಾಜಶ್ರೀ ಜೈನಾಪೂರ, ಕೆ.ಎ.ಎಸ್., ಕುಲಸಚಿವರು(ಮೌಲ್ಯಮಾಪನ) ರಾ ಪ್ರೊ. ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿಗಳಾದ ಭರತ ಡಿ. ಕಟ್ಟಿ ಅಲ್ಲದೇ ವಿಶ್ವವಿದ್ಯಾಲಯದ ವಿವಿಧ ನಿಖಾಯಗಳ ಡೀನರು ಮತ್ತು ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು ಹಾಗೂ ವಿಶ್ವವಿದ್ಯಾಲಯದ ಅಭಿಯಂತರರು ಹಾಜರಿದ್ದರು./////