Belagavi News In Kannada | News Belgaum

ಕನ್ನಡ ರತ್ನ ಪುನೀತ್ ರಾಜಕುಮಾರ್ ಅವರ ಎರಡನೇ ಪುಣ್ಯ ಸ್ಮರಣೆಯನ್ನು ನಗರದ ಶಿವಾಜಿನಗರದಲ್ಲಿ ಆಚರಿಸಿದರು

ಬೆಳಗಾವಿ : ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರ ೨ ನೇ ಪುಣ್ಯ ಸ್ಮರಣೆಯನ್ನು ನಗರದ ಶಿವಾಜಿನಗರದಲ್ಲಿ ಗಿರಿಜಾ ಕೋಲುರು ರವರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ೨ ನೇ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.

ಈ ಪುಣ್ಯ ಸ್ಮರಣೆಯ ಕಾರ್ಯಕ್ರಮಕ್ಕೆ ಸಾತ್ ನೀಡಿ
ಸ್ಥಳೀಯರು  ಭಾಗವಹಿಸಿದ್ದರು ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷ ಗಿರಿಜಾ ಕೋಲೂರು ಮಾತನಾಡಿ, ಇಂದು ಅಪ್ಪು ಇಲ್ಲದ ದಿನ ದುಃಖಕರ ಸಂಗತಿಯಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಪುನೀತ್ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಅಪ್ಪು ಅವರು ನಮ್ಮ ದೇಶಕ್ಕೆ ಮಾದರಿಯಾಗಿದ್ದರು ಎಂದು ಅವರನ್ನು ನಾವೆಲ್ಲರೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸ್ಮರಿಸೋಣ ಎಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಜಿಲ್ಲಾಧ್ಯಕ್ಷ ಬಾಳಪ್ಪಾ ಗುಡಗೇನಟ್ಟಿ  ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಅಭಿಲಾಶ್ ಸತೀಶ್ ಗುಡಗೇನಟ್ಟಿ ರಮೇಶ್ ಪಟೇಲ್ ಶ್ರೀಕಾಂತ್  ಮತ್ತು ನಿತೇಶ್ ಕಿತ್ತೂರು ಶೃತಿ ತುರ್ಕೆಕರ್ ಕಂಗ್ರಾಳಿ ಗ್ರಾಮ ಪಂಚಾಯತ್ ಸದಸ್ಯ ಜನಭಾಯಿ ಹಾಗೂ ಕರವೇ ಯುವಸೇನೆ ಪದಾಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು