ಬೆಳಗಾವಿ ರಾಜಕಾರಣದಿಂದ ಸರಕಾರ ಪತನ : ಮಾಜಿ ಸಚಿವ ರಮೇಶ.

ಬೆಳಗಾವಿ : ರಾಜ್ಯ ಸರಕಾರ ಬೆಳಗಾವಿ ರಾಜಕಾರಣದಿಂದಲೇ ಪತನವಾಗುತ್ತದೆ. ಇದಕ್ಕೆ ಕಾರಣ ಡಿ.ಕೆ.ಶಿವಕುಮಾರ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಭವಿಷ್ಯ ನುಡಿದರು..
ಸೋಮವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಮತ್ತು ನಾಟಕ ಕಂಪನಿ ಆಪರೇಷನ್ ಕಮಲಕ್ಕೆ ನೂರು ಕೋಟಿ ರೂ. ಆರೋಪ ಮಾಡುತ್ತಿದ್ದಾರೆ. ಈಗ ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ ಎಂದರು..
ಕಳೆದ 2019ರಲ್ಲಿ ಡಿ.ಕೆ.ಶಿವಕುಮಾರ ದುರಂಕಾರದಿಂದ ಸಮ್ಮಿಶ್ರ ಸರಕಾರವನ್ನು ಪಥನಗೊಳಿಸಿದ್ದೆ. ಆದರೆ ಈಗ ನಾವು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು..
ಕೇವಲ ಡಿ.ಕೆ.ಶಿವಕುಮಾರ ಬಾಯಲ್ಲಿ ಮಾತ್ರ ಆಪರೇಷನ್ ಮಾತು ಬರುತ್ತಿವೆ. ರಾಜ್ಯ ಸರಕಾರ ಪತನವಾಗಬಾರದು. ಐದು ವರ್ಷ ಆಡಳಿತ ನಡೆಸಲಿ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಧೋರಣೆಯ ಬಗ್ಗೆ ಜನರಿಗೆ ತಿಳಿಯಬೇಕಿದೆ ಎಂದರು..
ಕಳೆದ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಸಮರ್ಥವಾಗಿ ನಡೆಸಿದ್ದರು. ಆದರೆ ಈಗ ಅವರ ಕೈ ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ ಮೋಸಗಾರ, ಪ್ರತಿ ಚುನಾವಣೆಯಲ್ಲಿಯೂ ಹೊಂದಾಣಿಕೆ ಮಾಡಿಕೊಂಡು ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ವಾಗ್ದಾಳಿ ನಡೆಸಿದರು..
ನೆಲಮಂಗಲ, ಕೊಳ್ಳೆಗಾಲ ಮಾಜಿ ಶಾಸಕರಿಗೆ ಸಿಡಿ ಇದೆ ಎಂದು ಬೇದರಿಕೆ ಹಾಕುತ್ತಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ನನ್ನ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಶೀಘ್ರದಲ್ಲಿಯೇ ಮನವಿ ಮಾಡುವೆ ಎಂದರು.