ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ ಕರವೇ ಯುವ ಸೇನೆ ಜಿಲ್ಲಾ ಘಟಕ

ಬೆಳಗಾವಿ:ಕರ್ನಾಟಕ ಸಂಭ್ರಮದ ದಿನಾಚರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ದಿನಾಂಕ: 1-11-2023 ರಂದು ನಗರದ ಚನ್ನಮ್ಮ ವೃತ್ ಪಾಲಿಟೆಕ್ನಿಕ್ ಕಾಲೇಜಿನ ಎದರಿಗೆ ಬೆಳಗಾವಿಯ ಜಿಲ್ಲಾಧ್ಯಕ್ಷ ಬಾಳಪ್ಪಾ ಗುಡಗೆನಟ್ಟಿ ರವರ ನೇತೃತ್ವದಲ್ಲಿ ರಾಜ್ಯೋತ್ಸವ ಕಾರ್ಯಕ್ರಮಗಳನ್ನು.
ತಾಯಿ ಭುವನೇಶ್ವರಿ ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಪೂಜ ಸಲ್ಲಿಸಿ ಪುಷ್ಪಾರ್ಚನೆ ಮಾಡುತ್ತಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ ಕರ್ನಾಟಕ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಿದರು.
ಈ ಸಮಯದಲ್ಲಿ ಕರವೇ ಯುವ ಸೇನೆಯ ಜಿಲ್ಲಾ ಸಲಹೆಗಾರರಾದ ಸತೀಶ್ ಗುಡಗೇನಟ್ಟಿ ಹಾಗೂ ಕರವೇ ಮಹಿಳಾ ಘಟಕ ಅಧ್ಯಕ್ಷರಾದ ಗಿರಿಜಾ ಕೋಲುರ್ ಗ್ರಾಮಾಂತರ ಮಹಿಳಾ ಅಧ್ಯಕ್ಷರಾದ ಶೃತಿ ತುರ್ಕೆಕರ್ ನಗರ ಅಧ್ಯಕ್ಷರಾದ ರಾಮಪ್ಪಾ ಪಾಟೀಲ್ ಇನ್ನೊಬ್ಬ ಅತಿಥಿ ಶಿವು ಶಿರಟ್ಟಿ ವಾಜೀದ್ ಹಿರೆಕೋಡಿ ಕರವೇ ಯುವ ಸೇನೆಯ ಕಾರ್ಯದರ್ಶಿಯಾದ ನಿತೇಶ್ ಕಿತ್ತೂರ್ ರೇಖಾ ಗುಡಗೇನಟ್ಟಿ ರಮೇಶ್ ಪಟೇಲ್ ವೀಣಾ ಇನ್ನುಳಿದ ಪದಾಧಿಕಾರಿಗಳು ಕನ್ನಡಿಗರು ಉಪಸ್ಥಿತರಿದ್ದರು.