Belagavi News In Kannada | News Belgaum

ತೋಟ-ಉದ್ಯಾನವನಗಳ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ

ಬೆಳಗಾವಿ, ನ.06 : ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ) ಬೆಳಗಾವಿ, ಹಾಗೂ ಬೆಳಗಾವಿ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತ ಆಶ್ರಯದಲ್ಲಿ 2023-24 ನೇ ಸಾಲಿನ 64 ನೇ ಫಲಪುಷ್ಪ ಪ್ರದರ್ಶನದ ಅಂಗವಾಗಿ ಪ್ರತಿ ವರ್ಷದಂತೆ ಸಾರ್ವಜನಿಕ ಉದ್ಯಾನವನಗಳು, ಶಾಲೆ ಕಾಲೇಜಗಳಲ್ಲಿ ಅಭಿವೃದ್ಧಿ ಪಡಿಸಿದ ಉದ್ಯಾನವಗಳು, ಸಂಘ ಸಂಸ್ಥೆಗಳಲ್ಲಿ ಅಭಿವೃದ್ಧಿ ಪಡಿಸಿದ ಉದ್ಯಾನವಗಳು, ಖಾಸಗಿ/ಸರ್ಕಾರಿ ಕಛೇರಿ/ಮನೆಗಳ ಮುಂದೆ ಅಭಿವೃದ್ಧಿ ಪಡಿಸಿದ ಉದ್ಯಾನವನಗಳು, ಕಾರ್ಖಾನೆ/ಉದ್ಯಮಗಳು ಅಭಿವೃದ್ಧಿ ಪಡಿಸಿದ ಉದ್ಯಾನವಗಳು ಹಾಗೂ ವಿಶೇಷವಾಗಿ ತೋಟಗಾರಿಕೆಯಲ್ಲಿ ಅಭಿವೃದ್ಧಿ ಪಡಿಸಿರುವ ಇತರೆ ಉದ್ಯಾನವನಗಳಿಗೆ ಸ್ಪರ್ದೆ ಎರ್ಪಡಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಉದ್ಯಾನವನಗಳನ್ನು ನುರಿತ ತಜ್ಞರಿಂದ ನ.11 2023 ರಿಂದ ನ.22 2023 ರ ರೊಳಗಾಗಿ ಪರಿಶೀಲನೆಗೊಳಪಡಿಸಿ ಅತ್ಯಂತ ಸುಂದರವಾಗಿ ನಿರ್ವಹಣೆ ಮಾಡಿರುವ ಉದ್ಯಾನವನಗಳಿಗೆ ನವೆಂಬರ ತಿಂಗಳಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಆಕರ್ಷಕ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ನ. 10 2023 ರೊಳಗೆ ಅರ್ಜಿಗಳನ್ನು ಪಡೆದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :0831-2451422 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ತೋಟಗಾರಿಕೆ ಸಂಘ ಪದನಿಮಿತ್ತ ಕಾರ್ಯದರ್ಶಿಗಳು ಹಾಗೂ (ಜಿಪಂ) ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.