ಬಹುಮಹಡಿ ವಾಣಿಜ್ಯ ಮಳಿಗೆ ಭೂಮಿ ಪೂಜೆ
ನಿಗದಿತ ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಅಸೀಫ್ (ರಾಜು) ಸೇಠ

ಬೆಳಗಾವಿ, ನ.06 : ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಬೆಳಗಾವಿ ಸ್ಮಾರ್ಟ ಸಿಟಿ ಲಿಮಿಟೆಡ್ ಇವರ ಜಂಟಿ ಸಹಯೋಗದಲ್ಲಿ ಖಾಸಗಿ ಸಹಭಾಗಿತ್ವದ(Public Private Partnership) ಬೆಳಗಾವಿ ನಗರದ ಧರ್ಮನಾಥ ವೃತ್ತದಲ್ಲಿ ಅಭಿವೃದ್ಧಿಪಡಿಸುರುವ ಬಹುಮಹಡಿ ವಾಣಿಜ್ಯ ಮಳಿಗೆ ಮತ್ತು ಬಹುಪಯೋಗಿ ಸೌಲಭ್ಯ ಕೇಂದ್ರ(Multi-Utility Facilitation Centre (MUFC)) ಕಟ್ಟಡದ ಭೂಮಿ ಪೂಜಾ ಸಮಾರಂಭ ಸೋಮವಾರ (ನ.6) ನೇರವೆರಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸದರಾದ ಮಂಗಳಾ ಅಂಗಡಿ ಅವರು ಮಾತನಾಡಿ ಇಂದು ಪ್ರಾರಂಭಿಸಲಾದ ಈ ಕಾಮಗಾರಿ ಬಹುಪಯೋಗಿ ಆಗಿದ್ದು, ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕರಾದ ಅಸೀಫ್ (ರಾಜು) ಸೇಠ ಮಾತನಾಡಿ ಈ ಕಾಮಗಾರಿ ನಿಗದಿತ ಸಮಯದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.
ಸದರಿ ಕಾಮಗಾರಿ ಪೂರ್ಣಗೊಂಡ ನಂತರ ಸುತ್ತನ ಬಡಾವಣೆಗಳು ಸರ್ವಾಂಗೀಣ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲ ಸ್ಮಾರ್ಟ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಸೈಯದಾ ಆಫ್ರೀನ್‍ಬಾನು ಎಸ್. ಬಳ್ಳಾರಿ ಅವರು ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಅಧೀಕ್ಷಕ ಅಭಿಯಂತರರಾದ ಲಕ್ಷ್ಮೀ ನಿಪ್ಪಾಣಿಕರ, ಸ್ಥಳೀಯ ನಗರ ಸೇವಕರು, ಮಹಾನಗರ ಪಾಲಿಕೆ ಬೆಳಗಾವಿ ಮತ್ತು ಬೆಳಗಾವಿ ಸ್ಟಾರ್ಟ ಸಿಟಿ ಅಧಿಕಾರಿ/ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.