Belagavi News In Kannada | News Belgaum

ರೇಷ್ಮೆ ಕೃಷಿ ಅಭಿವೃದ್ದಿಗೆ ಕ್ರಮವಹಿಸಲು ಸಚಿವ ಕೆ. ವೆಂಕಟೇಶ ಸೂಚನೆ

ರೇಷ್ಮೆ ಇಲಾಖೆ: ಪ್ರಗತಿ ಪರಿಶೀಲನಾ ಸಭೆ

ಬೆಳಗಾವಿ, ನ.06: ರೇಷ್ಮೆಗೆ ರಾಜ್ಯದಲ್ಲಿ ಅಪಾರ ಬೆಲೆ ಇದ್ದು, ರೈತರಿಗೆ ರೇಷ್ಮೆ ಕೃಷಿ ಬಗ್ಗೆ ಹೆಚ್ಚಿನ ತರಬೇತಿ, ಪ್ರಚಾರ ಜೊತೆಗೆ ಆಸಕ್ತಿ ಹೆಚ್ಚಿಸಲು ಶ್ರಮ ವಹಿಸಿ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಕಸಚಿವ ಕೆ. ವೆಂಕಟೇಶ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ (ನ.6) ರಂದು ನಡೆದ ಬೆಳಗಾವಿ ವಿಭಾಗ ಮಟ್ಟದ ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುಣಮಟ್ಟದ ರೇಷ್ಮೆಯನ್ನು ವಿವಿಧ ಜಿಲ್ಲೆಗಳಲ್ಲಿ ಬೆಳೆದಂತ ರೈತರು ದೂರದ ಮಾರ್ಕೆಟಿನಲ್ಲಿ ಮಾರಾಟ ಮಾಡುವುದಕ್ಕಿಂತ ಸ್ಥಳೀಯ ಮಾರ್ಕೆಟ್ ಗಳಲ್ಲಿ ಮಾರಾಟ ಮಾಡಿದರೆ, ಸಮಯ ತಗಲುವ ವೆಚ್ಚ, ಸೇರಿಂದಂತೆ ಹೆಚ್ಚಿನ ಅನುಕೂಲವಾಗುವುದು ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಹಾವೇರಿಯಲ್ಲಿ ಗುಣಮಟ್ಟದ ರೇಷ್ಮೆಯನ್ನು ಬೆಳೆದು,ಬೇರೆ ಬೇರೆ ರಾಜ್ಯಗಳಿಗೆ ಕೂಡಾ ರಪ್ತು ಮಾಡಲಾಗುವುದು ಆದ್ದರಿಂದ ರೇಷ್ಮೆ ಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹಾವೇರಿ ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಹೇಳಿದರು.
ರೇಷ್ಮೆ ನರ್ಸರಿಗಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳ ಜೊತೆಗೆ, ಸಿಬ್ಬಂದಿಗಳ ಭರ್ತಿ ಮಾಡಿದರೆ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗುವುದು ಎಂದು ಹೇಳಿದರು.
ರೇಷ್ಮೆ ಕೃಷಿ ಅಭಿವೃದ್ಧಿ ಯೋಜನೆ ರಾಷ್ಟ್ರಿಯ ಕೃಷಿ ವಿಕಾಸ್ ಯೋಜನೆ, ಪ್ರಧಾನಮಂತ್ರಿ ಸಿಂಚಾಯಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ರೈತರಿಗೆ ಸಾಲ ಮತ್ತು ಸಹಾಯಧನ ನೀಡಿ ರೇಷ್ಮೆ ಬೆಳೆ ಬೆಳೆಯಲು ಉತ್ತಜಿಸಲಾಗಿದೆ ಎಂದು ಬೆಳಗಾವಿ ರೇಷ್ಮೆ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕರಾದ ಸಿದ್ದಪ್ಪ ಕೋರೆ ಅವರು ಹೇಳಿದರು.
ರೇಷ್ಮೆ ಇಲಾಖೆ ಬೆಂಗಳೂರು ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕರಾದ ಎಂ.ಎನ್ ಸಂದ್ಯಾ, ಬೆಳಗಾವಿ ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ (ಪ್ರಭಾರಿ) ಜಿ. ಬಿ. ಮಾಳನ್ನವರ, ಧಾರವಾಡ ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ಎಂ.ಎಸ್. ಪಾಟೀಲ, ಗದಗ ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಕುಮಾರ ವಾಗೆ ಸೇರಿದಂತೆ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.