ಸ್ಕೌಟ್: ರಾಜ್ಯ ಪ್ರಶಸ್ತಿಗೆ ಆಯ್ಕೆ

ಬೆಳಗಾವಿ: ಕರ್ನಾಟಕ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪ್ರಶಸ್ತಿಗೆ ಶಿಂದೊಳ್ಳಿಯ ಗೋಪಾಲ ಜಿನಗೌಡ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ದೇವೇಂದ್ರ ಜಿನಗೌಡ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕರ್ನಾಟಕ ಸ್ಕೌಟ್ ಮತ್ತು ಗೈಡ್ ಇಲಾಖೆಯು ಶೇಡಬಾಳದಲ್ಲಿ ಆಗಸ್ಟ್ 9, 10 ಮತ್ತು 11 ರಂದು ಪರೀಕ್ಷೆಯನ್ನು ನಡೆಸಿತು, ಅಲ್ಲಿ ಶಾಲೆಯ ಏಳು ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳಿದ್ದರು.
ಈ ಪೈಕಿ ಚಿನ್ಮಯ್ ಶಶಿಧರ ಮ್ಯಾಗೋಟಿ, ಪ್ರಣವ್ ಇಟಗಿ, ಕಲಗೌಡ ಪಾಟೀಲ್, ವಿನಯ್ ಪಾಟೀಲ್, ಭುವನ ದೇಸಾಯಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಜ್ಯ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸ್ಕೌಟ್ ಮಾಸ್ಟರ್ ಪ್ರಶಾಂತ್ ವಾಡ್ಕರ್ ಮಾರ್ಗದರ್ಶನ ನೀಡಿದರು. ಅಧ್ಯಕ್ಷರಾದ ಶ್ರೀ ಗೋಪಾಲ ಜಿನಗೌಡ, ಕಾರ್ಯದರ್ಶಿ ಕುಂತುಸಾಗರ ಹರದಿ, ಮುಖ್ಯೋಪಾಧ್ಯಾಯನಿ ವಿಜಯಲಕ್ಷ್ಮೀ ಪಾಟೀಲ, ಉಪ ಮುಖ್ಯೋಪಾಧ್ಯಾಯನಿ ರೋಶನಿ ರೋಡ್ರಿಗಸ್, ಶಿಕ್ಷಕ ವೃಂದದವರು ಹಾಗೂ ಆಡಳಿತ ಸಮಿತಿಯು ಮೇಲ್ಕಂಡ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.