Belagavi News In Kannada | News Belgaum

ನ.15 ಕ್ಕೆ ಬಿಜೆಪಿ-ಜೆಡಿಎಸ್ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ : ಡಿಕೆಶಿ ಸ್ಪೋಟಕ ಹೇಳಿಕೆ

ನವದೆಹಲಿ : ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತದ ಕುರಿತಂತೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪೋಟಕ ಹೇಳಿಕೆಯೊದನ್ನು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ನ ಹಲವು ನಾಯಕರು ದೀಪಾವಳಿ ನಂತರ ಅಂದ್ರೆ ನವೆಂಬರ್ 15 ಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಈಗಾಗಲೇ ಬಿಜೆಪಿ-ಜೆಡಿಎಸ್ ನ ಹಲವು ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ನವೆಂಬರ್ 15 ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾವೇರಿ ನೀರು ಮೀಸಲಿಡುವ ಬಗ್ಗೆ ಸರ್ಕಾರದಿಂದ ನೀರು ಮೀಸಲಿಡುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ‘ಸುಪ್ರೀಂ’ ಅನುಮತಿ ಪಡೆದು ಪ್ರತಿವರ್ಷ 24 ಟಿಎಂಸಿ ನೀರು ಮೀಸಲಿಟ್ಟು ಆದೇಶ ಹೊರಡಿಸಿದ್ದೇವೆ ಎಂದರು.

ಮೇಕೆದಾಟು ವಿಚಾರವನ್ನು CWMA ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ‘ಸುಪ್ರೀಂ’ ಆದೇಶದಂತೆ ಬೆಂಗಳೂರಿಗೆ 24 ಟಿಎಂಸಿ ನೀರು ಮೀಸಲಿಡುತ್ತೇವೆ. ಮುಂದಿನ ವಾರ ಮೇಕೆದಾಟು ಯೋಜನೆ ವಿಚಾರ ಚರ್ಚೆಗೆ ಬರಲಿದೆ ಎಂದು ಹೇಳಿದರು./////