Belagavi News In Kannada | News Belgaum

ಒಳ ಉಡುಪಿನಲ್ಲಿ ಚಿನ್ನಭಾರಣ ಸಾಗಾಣಿ ಮಾಡುತ್ತಿದ್ದ ಐವರ ಬಂಧನ

ಬೆಂಗಳೂರು: ಮಾತ್ರೆ ಹಾಗೂ ಒಳ ಉಡುಪಿನಲ್ಲಿ ಚಿನ್ನಭಾರಣ ಕಳ್ಳಸಾಗಣೆ ಮಾಡುತ್ತಿದ್ದ ಐವರನ್ನು ಬೆಂಗಳೂರು ವಿಮಾನ ನಿಲ್ದಾಣದ ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ..

ಬಂಧಿತರಿಂದ 3.9 ಕೋಟಿ ರೂ. ಮೌಲ್ಯದ 5.135 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎರಡು ದಿನದಲ್ಲಿ ಕುವೈತ್, ದುಬೈ, ಶಾರ್ಜಾ, ಮತ್ತು ಬ್ಯಾಂಕಾಕ್‍ನಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಳ್ಳ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ..

ಆರೋಪಿಗಳು ಮಾತ್ರೆಗಳಲ್ಲಿ, ಒಳ ಉಡುಪು ಹಾಗೂ ಮಹಿಳೆಯರ ಪರ್ಸ್‍ಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.