Belagavi News In Kannada | News Belgaum

ಯುವ ಮತದಾನ ಹೆಚ್ಚಾಗಲಿ : ಸಿಇಒ ಹರ್ಷಲ್ ಬೊಯರ


ಬೆಳಗಾವಿ : ಎಲ್ಲ ಇಲಾಖೆಗಳಲ್ಲಿ ಮತದಾನದ ಕುರಿತು ವ್ಯಾಪಕ ಪ್ರಚಾರ ಕೈಗೊಂಡು ಬರುವ ಲೋಕಸಭಾ ಚುನಾವಣೆಯಲ್ಲಿ ಯುವಕರ ಮತದಾನ ಪ್ರಮಾಣ ಹೆಚ್ಚಳವಾಗುಂತೆ ನೋಡಿಕೊಳ್ಳುಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ಹಾಹಕ ಅಧಿಕಾರಿಗಳಾದ ಹರ್ಷಲ್ ಬೊಯರ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನವೆಂಬರ 10 ಶುಕ್ರವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಸ್ವೀಪ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಕರಿಗೆ ಇಷ್ಟವಾಗುವ ಹಾಡುಗಳನ್ನು ರಚಿಸಿ, ಅವುಗಳನ್ನು ಪ್ರಸಾರ ಮಾಡುವದರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಯುವಕರ ಗಮನವನ್ನು ಲೋಕಸಭೆಯ ಮತದಾನದತ್ತ ಸೆಳೆಯಬೇಕೆಂದು ತಿಳಿಸಿದರು.
ಇಲಾಖೆವಾರು ವಾರಕ್ಕೆ ಒಂದು ವಿವಿಧ ಬಗೆಯ ವಿಶಿಷ್ಠವಾದ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಅದರ ಜೊತೆಗೆ ಕಾರ್ಯಕ್ರಮಗಳ ಧಾಖಲಾತಿಗಳನ್ನು ಸಂಗ್ರಸಿಕೊಳ್ಳಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸೈಕಲ್ ಜಾಥಾ, ಭೈಕ್ ಜಾಥಾ, ಅಂಧ ಮಕ್ಕ ಸೈಕಲ್ ಜಾಥಾ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ ಸೇರಿದತೆ ಇತರ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮತದಾನವನ್ನು ಹೆಚ್ಚಿಸಬೇಕೆಂದು ಹೇಳಿದರು
ಲೋಕಸಭಾ ಚುನಾವಣೆಯ ಐ.ಎ.ಎಸ್ .ಪ್ರೊಬೇಷನರಿ ಅಧಿಕಾರಿಗಳಾದ ಶುಭಂ ಶುಕ್ಲಾ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪನವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ನಾಗರಾಜ ಆರ್, ಯುವ ಸಭಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಬಿ. ಶ್ರೀನಿವಾಸ, ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೊಡೆಕರ, ಎಸ್ .ಬಿ. ಎಮ್ ಬಾಹುಬಲಿ ಮೆಳವಂಕಿ, ತಾಐಇಸಿ ಸಂಯೋಜಕ ರಮೇಶ ಮಾದರ, ದತ್ತಾ ಚವ್ಹಾನ ಸೇರಿತಂದತೆ ಇತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.