Belagavi News In Kannada | News Belgaum

ರಕ್ತದಾನ ಮಾಡಿರಿ ಸಾರ್ಥಕತೆ ಮೆರೆಯಿರಿ: ಎಂ.ಆರ್.ಮುಂಜಿ

ರಕ್ತದಾನದ ಶಿಬಿರ

ಬೆಳಗಾವಿ, ನ.10 : ರಕ್ತದಾನದ ಶಿಬಿರಕ್ಕೆ ಅರ್ಥಬರಬೇಕಾದರೆ, ರಕ್ತವನ್ನು ದೇಶದ ಗಡಿ ಕಾಯುವ ಸೈನಿಕರಿಗೆ ಅನಾರೋಗ್ಯವಿದ್ದಾಗ ಅವರ ದೇಹದಲ್ಲಿ ತೂರಿಬಿಡಿ ಬದುಕಿ ಬಂದು ದೇಶ ರಕ್ಷಣೆ ಮಾಡಲಿ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ತೂರಿ ಬೀಡಿ ಬದುಕಿ ಬಂದು ಸಮಾಜ ಸೇವೆ ಮಾಡಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ .ಎಂ.ಆರ್.ಮುಂಜಿ ಅವರು ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು .
ವಾಯುವ್ಯ ಕರ್ದಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿಯ ವಿಭಾಗಿಯ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಭಾಗೀಯ ಕನ್ನಡ ಪ್ರಿಯಾ ಸಮಿತಿ ಆದರ್ಶ ಬ್ಲಡ್ ಬ್ಯಾಂಕ್ ಚಿಕ್ಕೋಡಿ, ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನ.04 2023 ರಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ರಕ್ತವನ್ನು ಅಪಘಾತದ ಚಾಲಕ & ನಿರ್ವಾಹಕರ ದೇಹದಲ್ಲಿ ತೂರಿ ಬಿಡಿ ಬದುಕಿ ಬಂದು ಸಾರಿಗೆ ಸೇವೆ ಸಲ್ಲಿಸಲಿ, ರಕ್ತವನ್ನು ಅನಾರೋಗ್ಯ ಪೀಡಿತ ವಿಜ್ಞಾನಿಗಳು, ಯುವ ಪೀಳಿಗೆ, ಸಾಹಿತಿಗಳಿಗೆ ದೇಹದಲ್ಲಿ ತೂರಿ ಬಿಡಿ ಬದುಕಿ ಬಂದು ದೇಶ ಕಟ್ಟಲಿ, ರಕ್ತದಾನ ಮಾಡುವವರ ಬದುಕು ಸಾರ್ಥಕವಾಗುತ್ತದೆ. ಮತ್ತು ರಕ್ತದಾನ ಮಹಾದಾನ ಎಂದು ಹೇಳಿದರು .
ಗೋಪಾಲ ವೈಭಜಂತ್ರಿ ಅವರು ಸ್ವಾಗತಿಸಿ ನಿರೂಪಣೆ ಮಾಡಿದರು ಹಾಗೂ ವಿಭಾಗದ ಅಧಿಕಾರಿಗಳಾದ ಎನ್.ಟಿ.ಪಾಟೀಲ, ಜೆ.ಎನ್.ಇನಾಮದಾರ, ವಿದ್ಯಾವಿಸ್ ಕಾಂಬಳೆ, ಎನ್.ಎಸ್.ಮಂಗಸೂಳಿ ಹಾಗೂ ಕನ್ನಡ ಕ್ರಿಯಾ ಸಮತಿ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.